ಮಂಗಳವಾರ, ಜುಲೈ 14, 2020
24 °C

ಕಾಗಿನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರು: ನಿರಂಜಾನಾನಂದ ಪುರಿ ಸ್ವಾಮೀಜಿ– ರಾಹುಲ್‌ ಗಾಂಧಿ ಭೇಟಿ, ಅಮಿತ್‌ ಶಾಗೆ ಸಿಗದ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಗಿನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರು: ನಿರಂಜಾನಾನಂದ ಪುರಿ ಸ್ವಾಮೀಜಿ– ರಾಹುಲ್‌ ಗಾಂಧಿ ಭೇಟಿ, ಅಮಿತ್‌ ಶಾಗೆ ಸಿಗದ ಸ್ವಾಮೀಜಿ

ಕಾಗಿನೆಲೆ: ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಏಕಕಾಲದಲ್ಲಿ ಮಂಗಳವಾರ ಕಾಗಿನೆಲೆ ಭೇಟಿ ನೀಡಿದರು.

ಕಾಗಿನೆಲೆ ಮೂಲ ಪೀಠದಿಂದ ಬೆಳ್ಳೊಡಿ ಶಾಖಾ ಮಠಕ್ಕೆ ಆಗಮಿಸಿದ್ದ ಕಾಗಿನೆಲೆ ಪೀಠದ ನಿರಂಜಾನಾನಂದ ಪುರಿ ಸ್ವಾಮೀಜಿ ಅವರನ್ನು ಜನಾಶೀರ್ವಾದ ಯಾತ್ರೆ ಕೈಗೊಂಡಿರುವ ರಾಹುಲ್‌ ಗಾಂಧಿ ಭೇಟಿಯಾದರು.

ಇದೇ ವೇಳೆ ಹಾವೇರಿಯ ಕಾಗಿನೆಲೆ ಮೂಲ ಪೀಠಕ್ಕೆ ಅಮಿತ್‌ ಶಾ ಭೇಟಿ ನೀಡಿದರು. ಆದರೆ, ನಿರಂಜಾನಾನಂದ ಪುರಿ ಸ್ವಾಮೀಜಿ ಅವರು ಶಾಖಾ ಮಠದಲ್ಲಿ ರಾಹುಲ್‌ ಅವರ ಭೇಟಿಯಲ್ಲಿ ಇದ್ದ ಕಾರಣ ಅಮಿತ್‌ ಶಾ ಭೇಟಿ ಸಾಧ್ಯವಾಗಲಿಲ್ಲ. ‌‌

ಸಿಎಂ ಸಿದ್ದರಾಮಯ್ಯ,ರಾಹುಲ್ ಗಾಂಧಿ ಬೊಳ್ಳೊಡಿಗೆ ಆಗಮಿಸುತ್ತಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸ್ವಾಮೀಜಿ ಶಾಖಾ ಪೀಠದಲ್ಲೇ ಉಳಿದುಕೊಂಡಿದ್ದರು.

ಕಾಗಿನೆಲೆ ಮೂಲ ಪೀಠದಲ್ಲಿ ತಿಂಥಣಿ ಮಠದ ಸಿದ್ಧರಾಮ ಸ್ವಾಮೀಜಿ, ಹೊಸದುರ್ಗದ ಈಶ್ವರಾನಂದಪುರಿ ಸ್ವಾಮೀಜಿ, ಕಾಗಿನೆಲೆ ಕಿರಿಯ ಸ್ವಾಮೀಜಿ ಅಮೋಘಾನಂದಪುರಿ ಸ್ವಾಮೀಜಿ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.