ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೈನಿಕ, ಪೊಲೀಸರ ಸೇವೆ ಅನನ್ಯ’

ನಿವೃತ್ತ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್‌.ಎಸ್‌.ಪಾಟೀಲ ಅಭಿಮತ
Last Updated 3 ಏಪ್ರಿಲ್ 2018, 14:13 IST
ಅಕ್ಷರ ಗಾತ್ರ

ವಿಜಯಪುರ: ‘ಅನ್ನ ನೀಡುವ ಅನ್ನದಾತ, ದೇಶ ಕಾಯುವ ಸೈನಿಕ, ಸಾರ್ವಜನಿಕರ ಆಸ್ತಿ ರಕ್ಷಣೆಯ ಹೊಣೆ ಹೊತ್ತ ಆರಕ್ಷಕರ ಸೇವೆ ಅನನ್ಯ’ ಎಂದು ನಿವೃತ್ತ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ಎಸ್.ಪಾಟೀಲ ಹೇಳಿದರು.ನಗರದಲ್ಲಿನ ವಿಜಯಪುರ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಸೋಮವಾರ ನಡೆದ ಪೊಲೀಸ್ ಕಲ್ಯಾಣ ಹಾಗೂ ಧ್ವಜ ದಿನಾಚರಣೆ ಸಮಾರಂಭದಲ್ಲಿ ಪಥ ಸಂಚಲನಾ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದ ಅವರು ಮಾತನಾಡಿದರು.

‘ಸಾರ್ವಜನಿಕರ ಆಸ್ತಿ- ರಕ್ಷಣೆ, ಸುಗಮ ಸಂಚಾರ, ಕಾನೂನು -ಸುವ್ಯವಸ್ಥೆ ಕಾಪಾ ಡುವ ಮಹತ್ತರವಾದ ಕಾರ್ಯ ದಲ್ಲಿ ತೊಡಗಿಸಿಕೊಳ್ಳುವ ಪೊಲೀಸ್ ಇಲಾಖೆಯ ಸಿಬ್ಬಂದಿ ದಣಿವಿಲ್ಲದೆ ಜನ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.24X7 ಅವಧಿ ಸಾರ್ವಜನಿಕರ ಸೇವೆಗೆ ಪೊಲೀಸರು ಸದಾ ಸನ್ನದ್ಧರಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ತಮ್ಮ ಆರೋಗ್ಯದ ಬಗ್ಗೆ ಹಾಗೂ ಕುಟುಂಬ ಸದಸ್ಯರ ಬಗ್ಗೆ ಗಮನ ಕೊಡುವುದು ಸಾಧ್ಯವಾಗುತ್ತಿಲ್ಲ. ಆದರೂ ಸಹ ತಮ್ಮ ಆರೋಗ್ಯದ ಬಗ್ಗೆ ವಿಶೇಷ ಮುತವರ್ಜಿ ವಹಿಸಬೇಕು’ ಎಂದು ಕಿವಿಮಾತು ಹೇಳಿದರು.‘ಉತ್ತಮ ಆರೋಗ್ಯ ಹೊಂದಿ ದ್ದರೆ ಮಾತ್ರ ಸಮರ್ಪಕವಾಗಿ ಸೇವೆ ಸಲ್ಲಿಸಲು ಸಾಧ್ಯ. ಸಾರ್ವಜನಿಕರ ಸೇವೆ ಹಾಗೂ ಸುರಕ್ಷತೆಯನ್ನೇ ಆರಕ್ಷಕ ಸಿಬ್ಬಂದಿ ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದಾರೆ. ಇಂತಹ ಪವಿತ್ರವಾದ ಸೇವೆ ಸಲ್ಲಿಸುತ್ತಿರುವ ಆರಕ್ಷಕ ಸಿಬ್ಬಂದಿಯನ್ನು ಪ್ರತಿಯೊ ಬ್ಬರು ಗೌರವಿಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಕ್ಕಂ ಪ್ರಕಾಶ್‌ ಅಮೃತ್‌ ಮಾತನಾಡಿ, ಪೊಲೀಸ್ ಧ್ವಜ ದಿನಾಚರಣೆ ತನ್ನದೇ ಆದ ಮಹತ್ವ ಹೊಂದಿದೆ. ಈ ದಿನದಂದು ಪೊಲೀಸ್ ಸಿಬ್ಬಂದಿಯ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಕುರಿತು ಚರ್ಚೆ, ಸೇವೆ ಸಲ್ಲಿಸಿ ನಿವೃತ್ತರಾದ ಪೊಲೀಸ್ ಸಿಬ್ಬಂದಿಯ ಸೇವೆಯನ್ನು ಸ್ಮರಿಸಲಾಗುತ್ತದೆ. ನಿವೃತ್ತಿಯ ನಂತರವೂ ಸಹ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಸಲಹೆ–-ಸೂಚನೆ ನೀಡಬೇಕು’ ಎಂದರು.

‘ಈ ಮೊದಲು ನವೆಂಬರ್ 2ರಂದು ಪೊಲೀಸ್ ಕಲ್ಯಾಣ ದಿನ, ಏಪ್ರಿಲ್ 2ರಂದು ಪೊಲೀಸ್ ಧ್ವಜ ದಿನಾಚರಣೆ ನಡೆಸಲಾಗುತ್ತಿತ್ತು. ಆದರೆ 1984ರಿಂದ ಈ ಎರಡೂ ದಿನಾಚರಣೆಗಳನ್ನು ಒಟ್ಟಿಗೆ ಆಚರಿ ಸಲಾಗುತ್ತಿದೆ. ಪೊಲೀಸ್ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಪೊಲೀಸರ ಜೀವನ ಮಟ್ಟವನ್ನು ಸುಧಾರಿಸುವ ಕೆಲಸ ಸರ್ಕಾರದ ಹಂತದಲ್ಲೇ ನಡೆಯುತ್ತಿದೆ’ ಎಂದರು.

ವಿವಿಧ ಪಥ ಸಂಚಲನಾ ತಂಡಗಳು ಆಕರ್ಷಕ ಪಥ ಸಂಚಲನೆ ನಡೆಸಿದವು.ಸಿಇಒ ಎಂ.ಸುಂದರೇಶಬಾಬು, ಪ್ರೊಬೇಷನರಿ ಐಪಿಎಸ್ ಅಧಿಕಾರಿ ಶ್ರೀನಿವಾಸಗೌಡ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಶಿವಕುಮಾರ, ಡಿವೈಎಸ್‌ಪಿಗಳಾದ ಮಹೇಶ್ವರಗೌಡ, ಡಿ.ಅಶೋಕ, ಪೊಲೀಸ್ ದೂರು ಪ್ರಾಧಿಕಾರಿಗಳ ಸದಸ್ಯ ಡಿ.ಎಸ್.ಗುಡ್ಡೋಡಗಿ, ನಿವೃತ್ತ ಪೊಲೀಸ್ ಅಧಿಕಾರಿ, -ಸಿಬ್ಬಂದಿ ಸಂಘದ ಅಧ್ಯಕ್ಷ ಗುಡಿಮನಿ ಉಪಸ್ಥಿತರಿದ್ದರು.

**

ಪೊಲೀಸ್‌ ಸಿಬ್ಬಂದಿ ಸಮಾಜ, ಜನರ ರಕ್ಷಣೆಗಾಗಿಯೇ ತಮ್ಮ ಜೀವನ ಮುಡುಪಿಟ್ಟಿದ್ದಾರೆ. ಸಾರ್ವಜನಿಕರು ಪೊಲೀಸರನ್ನು ಗೌರವಿಸಿ, ಅವರ ಸೇವೆ ಪ್ರಶಂಸಿಸಬೇಕಿದೆ – ಎನ್‌.ಎಸ್‌.ಪಾಟೀಲ, ನಿವೃತ್ತ ಎಎಸ್‌ಪಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT