ಎಚ್-1ಬಿ ವೀಸಾ ಅರ್ಜಿ ಸಲ್ಲಿಕೆ ಆರಂಭ

ಸೋಮವಾರ, ಮಾರ್ಚ್ 25, 2019
28 °C

ಎಚ್-1ಬಿ ವೀಸಾ ಅರ್ಜಿ ಸಲ್ಲಿಕೆ ಆರಂಭ

Published:
Updated:
ಎಚ್-1ಬಿ ವೀಸಾ ಅರ್ಜಿ ಸಲ್ಲಿಕೆ ಆರಂಭ

ವಾಷಿಂಗ್ಟನ್: ಎಚ್-1ಬಿ ವೀಸಾ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಅಮೆರಿಕ ಸೋಮವಾರದಿಂದ ಚಾಲನೆ ನೀಡಿದೆ.

ವೀಸಾ ಪ್ರಕ್ರಿಯೆಯ ಉಸ್ತುವಾರಿ ಹೊತ್ತಿರುವ ಅಮೆರಿಕದ ‘ಪೌರತ್ವ ಮತ್ತು ವಲಸೆ ಸೇವೆ’ (ಯುಎಸ್‌ಸಿಐಎಸ್‌) ಇಲಾಖೆ ಅರ್ಜಿಗಳನ್ನು ತೀವ್ರವಾಗಿ ಪರಿಶೀಲನೆಗೆ ಒಳಪಡಿಸಿ ಸ್ವೀಕರಿಸುತ್ತಿದೆ. ಅಕ್ಟೋಬರ್ 1ರಿಂದ ಆರಂಭವಾಗಲಿರುವ 2019ನೇ ಹಣಕಾಸು ವರ್ಷಕ್ಕಾಗಿ ಅರ್ಜಿ ಸ್ವೀಕರಿಸಲಾಗುತ್ತಿದೆ. ಅರ್ಜಿಗಳಲ್ಲಿ ಯಾವುದೇ ತಪ್ಪುಗಳಿದ್ದರೂ ಮಾನ್ಯ ಮಾಡಲಾಗುವುದಿಲ್ಲ ಎಂದು ಯುಎಸ್‌ಸಿಐಎಸ್‌ ಈಗಾಗಲೇ ಹೇಳಿದೆ.

ಭಾರತದ ಕಂಪನಿಗಳ ಅರ್ಜಿ ಇಳಿಕೆ: ಎಚ್‌–1 ಬಿ ವೀಸಾಗಳಿಗಾಗಿ ಅರ್ಜಿ ಸಲ್ಲಿಕೆ ಭಾರತದ ಐ.ಟಿ ಕಂಪನಿಗಳಿಂದ ಕಡಿಮೆಯಾಗಲಿದೆ. ಇದೇ ವೇಳೆ ಹಲವು ದೇಶಗಳ ಉದ್ಯೋಗಿಗಳು ವೀಸಾಕ್ಕಾಗಿ  ಅರ್ಜಿ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ. ಟ್ರಂಪ್‌ ಆಡಳಿತ ವೀಸಾ ಪ್ರಕ್ರಿಯೆಗೆ ಕಠಿಣ ನಿಯಮ ಜಾರಿಗೊಳಿಸಿರುವುದೇ ಇದಕ್ಕೆ ಕಾರಣ ಎಂದು ಸಿಲಿಕಾನ್ ವ್ಯಾಲಿಯ ಪತ್ರಿಕೆಯೊಂದು ವಿಶ್ಲೇಷಣೆ ಮಾಡಿದೆ.

‘ಇತ್ತೀಚಿನ ವರ್ಷಗಳಲ್ಲೇ ಎಚ್‌–1 ಬಿ ವೀಸಾಗೆ ಅರ್ಜಿ ಸಲ್ಲಿಕೆ ಕಠಿಣವಾಗಿದೆ’ ಎಂದು ಸ್ಯಾನ್‌ಫ್ರಾನ್ಸಿಸ್ಕೊ ಕ್ರೋನಿಕಲ್‌ನ ಸಂಪಾದಕೀಯ ವಿವರಿಸಿದೆ. ‘ವೀಸಾ ಅರ್ಜಿಗಳ  ಇಳಿಕೆ ಮತ್ತು ಹಿಂದೇಟು ಅರ್ಜಿದಾರರಿಗೆ ಮತ್ತು ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಕಂಪನಿಗಳಿಗೆ ಪರಿಣಾಮ ಬೀರಲಿದೆ’ ಎಂದು ಪತ್ರಿಕೆ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry