ಪಟ್ಟಿ ಬಿಡುಗಡೆ?

7

ಪಟ್ಟಿ ಬಿಡುಗಡೆ?

Published:
Updated:

ಒಂದು ವರ್ಷದ ಹಿಂದೆ ಬಿಜೆಪಿ ಅಧ್ಯಕ್ಷರು ಮಾಡಿದ್ದ ಘೋಷಣೆ: ‘ವಿಧಾನಸಭೆ ಚುನಾವಣೆಗೂ ಆರು ತಿಂಗಳ ಮೊದಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ... ಇತರರಿಗಿಂತ ನಾವು ಭಿನ್ನ!’ ತಿಂಗಳಾರಾಯಿತು... ಒಂಬತ್ತೂ ಆಯಿತು (ಡೆಲಿವರಿ!) ಬಿಡುಗಡೆ ಆಗಲೇ ಇಲ್ಲ ಪಟ್ಟಿ!

ಕಾಂಗ್ರೆಸ್‌ನವರು ದಸರಾಕ್ಕೆ, ದೀಪಾವಳಿಗೆ, ಸಂಕ್ರಾಂತಿಗೆ ಪಟ್ಟಿ ಬಿಡುಗಡೆ ಎಂದು ಮುಂದಿನ ಹಬ್ಬದ ದಿನದ ‘ತೇದಿಗೆ’ ಕಾಯುತ್ತಿರಬೇಕು. ಅಂತೂ ಪಟ್ಟಿ ಬಿಡುಗಡೆ ‘ಭಾಗ್ಯ’ ಕಾಣಲೇ ಇಲ್ಲ!

ಅರ್ಧ ಪಟ್ಟಿ ಬಿಡುಗಡೆಗೊಳಿಸಿ ಅರ್ಧ ‘ಟೆನ್ಶನ್’ ಕಮ್ಮಿ ಮಾಡಿಕೊಂಡಿದ್ದೇ ಜೆಡಿಎಸ್‌ನವರ ಹೆಗ್ಗಳಿಕೆ. ಉಳಿದ ಪಟ್ಟಿ ಬಿಡುಗಡೆ ಎಂತೋ?

‘ಪಟ್ಟಿ ಬಿಡುಗಡೆ’ ಶಬ್ದ ಕೇಳಿ ಕೇಳಿ ಮಂಡೆ ಬಿಸಿಯಲ್ಲೇ ಕಿರಾಣಿ ತರುವ ಶೆಟ್ಟರ ದುಕಾನಿಗೆ (ಅಂಗಡಿಗೆ) ಹೆಜ್ಜೆಯಿಟ್ಟೆ. ‘ರಾಯರೇ ವರ್ಷಾಂತ್ಯ (ಮಾರ್ಚ್ 31)’ ಎಂದು ನನ್ನ ತಿಂಗಳ ಕಿರಾಣಿಯ ಬಾಕಿ ಪಟ್ಟಿಯನ್ನು ಬಿಡುಗಡೆ ಮಾಡಿಯೇಬಿಟ್ಟರು ಶೆಟ್ಟರು! ಮಂಡೆ ಬಿಸಿಯಲ್ಲಿದ್ದುದರಿಂದ ಹೊಸದಾಗಿ ಬಿಸಿಯಾಗುವ ಅಗತ್ಯವಿ

ರಲಿಲ್ಲ! ನಮ್ಮ ಕಿರಾಣಿ ಅಂಗಡಿ ಶೆಟ್ಟರೇ ಪರ್ವಾಗಿಲ್ಲ ಅಲ್ವೇ!?

ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry