ಶನಿವಾರ, ಆಗಸ್ಟ್ 15, 2020
23 °C

‘ಫಿಕ್ಕಿ’ ಸಮಾರಂಭದಿಂದ ಹಿಂದೆ ಸರಿದ ಕೊಚ್ಚರ್‌

ಪಿಟಿಐ Updated:

ಅಕ್ಷರ ಗಾತ್ರ : | |

‘ಫಿಕ್ಕಿ’ ಸಮಾರಂಭದಿಂದ ಹಿಂದೆ ಸರಿದ ಕೊಚ್ಚರ್‌

ನವದೆಹಲಿ: ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ಮಹಿಳಾ ಘಟಕದ ವಾರ್ಷಿಕ ಮಹಾಸಭೆಯಿಂದ ಐಸಿಐಸಿಐ ಬ್ಯಾಂಕ್‌ನ ಸಿಇಒ ಚಂದಾ ಕೊಚ್ಚರ್‌ ಅವರು ಹಿಂದೆ ಸರಿದಿದ್ದಾರೆ.

ಇದೇ 5ರಂದು ನಡೆಯಲಿರುವ ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಗುತ್ತಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹತ್ತು ಮಂದಿ ಸನ್ಮಾನಿತರ ಪಟ್ಟಿಯಲ್ಲಿ ಅವರ ಹೆಸರೂ ಇತ್ತು. ಸಮಾರಂಭದ ಪರಿಷ್ಕೃತ ಆಹ್ವಾನ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲಾಗಿದೆ.

‘ಅವರನ್ನು ಅತಿಥಿಗಳನ್ನಾಗಿ ಆಹ್ವಾನಿಸಲಾಗಿತ್ತು. ಸನ್ಮಾನಿತರ ಪಟ್ಟಿಯಲ್ಲಿ ಅವರ ಹೆಸರೂ ಇತ್ತು. ಸಮಾರಂಭದಿಂದ ಹಿಂದೆ ಸರಿದಿರುವುದು ಅವರ ಸ್ವಂತ ನಿರ್ಧಾರ. ಕಚೇರಿಯಿಂದ ಬಂದ ದೂರವಾಣಿ ಕರೆಯು, ಚಂದಾ ಕೊಚ್ಚರ್‌ ಸಮಾರಂಭಕ್ಕೆ ಬರಲಾಗದಿರುವುದನ್ನು ತಿಳಿಸಿತ್ತು. ಹೀಗಾಗಿ ಆಹ್ವಾನಿತರ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲಾಗಿದೆ’ ಎಂದು ಫಿಕ್ಕಿ ಮಹಿಳಾ ಘಟಕದ ಕಾರ್ಯನಿರ್ವಾಹಕ ನಿರ್ದೇಶಕಿ ರಷ್ಮಿ ಸರಿತಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.