ಕರ್ಣಾಟಕ ಬ್ಯಾಂಕ್ ಎಂಸಿಎಲ್‌ಆರ್‌ ಪರಿಷ್ಕರಣೆ

7

ಕರ್ಣಾಟಕ ಬ್ಯಾಂಕ್ ಎಂಸಿಎಲ್‌ಆರ್‌ ಪರಿಷ್ಕರಣೆ

Published:
Updated:

ಮಂಗಳೂರು: ಕರ್ಣಾಟಕ ಬ್ಯಾಂಕ್ ವಿವಿಧ ಠೇವಣಿಗೆಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ ಬಡ್ಡಿ ದರದಲ್ಲಿ (ಎಂಸಿಎಲ್‌ಆರ್) ಪರಿಷ್ಕರಣೆ ಮಾಡಿದ್ದು, ಇದು ಏಪ್ರಿಲ್‌ 1ರಿಂದ ಜಾರಿಗೆ ಬಂದಿದೆ.

ಇದುವರೆಗೆ ಇದ್ದ ಒಂದು ವರ್ಷದ ಎಂಸಿಎಲ್‌ಆರ್‌ ಅನ್ನು ಶೇ 8.75 ರಿಂದ ಶೇ 8.80, ಅರ್ಧ ವರ್ಷದ ಎಂಸಿಎಲ್‌ಆರ್‌ ಅನ್ನು ಶೇ 8.40 ರಿಂದ 8.50, ತ್ರೈಮಾಸಿಕ ಎಂಸಿಎಲ್‌ಆರ್‌ ಅನ್ನು 8.35ರಿಂದ 8.45, ಮಾಸಿಕ ಎಂಸಿಎಲ್‌ಆರ್‌ ಅನ್ನು 8.30 ರಿಂದ 8.40 ಕ್ಕೆ ಹೆಚ್ಚಿಸಲಾಗಿದೆ.

ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಸಾಲದ ಬಡ್ಡಿದರದಲ್ಲಿ ಇಳಿಕೆ ಮಾಡಲಾಗಿದೆ. ವಾರ್ಷಿಕ ಶೇ 10.20 ರಿಂದ ಶೇ 9.65 ಹಾಗೂ ಶೇ 10.75 ರಿಂದ ಶೇ 9.80ಕ್ಕೆ ಇಳಿಕೆ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry