ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪೀಕರ್‌ ಕುರ್ಚಿ ಮೇಲೆ ಕುಳಿತ ಯುವಕ: ತನಿಖೆಗೆ ಆದೇಶ

Last Updated 3 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಅಹಮದಾಬಾದ್‌ : ಗುಜರಾತ್‌ ವಿಧಾನಸಭೆಯ ಸ್ಪೀಕರ್‌ ಕುರ್ಚಿಯ ಮೇಲೆ ಯುವಕನೊಬ್ಬ ಕುಳಿತ ಚಿತ್ರ ವೈರಲ್‌ ಆಗಿದ್ದು, ತನಿಖೆಗೆ ಆದೇಶಿಸಲಾಗಿದೆ.

‘ಸ್ಪೀಕರ್‌ ಕುರ್ಚಿಯಲ್ಲಿ ಸ್ಪೀಕರ್‌ ಅವರಲ್ಲದೆ ಬೇರೆಯವರು ಕುಳಿತುಕೊಳ್ಳುವ ಅಧಿಕಾರವಿಲ್ಲ. ಇದು ಭದ್ರತಾ ಲೋಪ. ಈ ಸಭಾಂಗಣದಲ್ಲಿ ಅಧಿಕೃತ ವ್ಯಕ್ತಿಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಇದೆ. ಅಪರಿಚಿತರು ಹೇಗೆ ಇಲ್ಲಿಯವರೆಗೆ ಬಂದರು ಎಂಬುದು ತಿಳಿದಿಲ್ಲ. ಆದ್ದರಿಂದ ಸ್ಪೀಕರ್‌ ರಾಜೇಂದ್ರ ತ್ರಿವೇದಿ ಅವರು ತನಿಖೆಗೆ ಆದೇಶಿಸಿದ್ದಾರೆ’ ಎಂದು ವಿಧಾನಸಭೆ ಕಾರ್ಯದರ್ಶಿ ಡಿ.ಎಂ.ಪಟೇಲ್‌ ಹೇಳಿದ್ದಾರೆ.

ವಾಟ್ಸ್‌ಆ್ಯಪ್‌ ಗುಂಪಿನಲ್ಲಿ ಈ ಚಿತ್ರ ಹರಿದಾಡುತ್ತಿದ್ದು, ಕುರ್ಚಿ ಮೇಲೆ ಕುಳಿತ ಯುವಕನನ್ನು ರಾಹುಲ್‌ ಎಂದು ಗುರುತಿಸಲಾಗಿದೆ. ಅಧಿವೇಶನ ಇಲ್ಲದ ಅವಧಿಯಲ್ಲಿ ಈ ಯುವಕ ಇನ್ನೊಬ್ಬನ ಜೊತೆ ಒಳಗೆ ಹೋಗಿರುವ ಸಾಧ್ಯತೆ ಇದ್ದು, ಆ ಇನ್ನೊಬ್ಬ ಯುವಕ ಫೋಟೊ ತೆಗೆದಿರಬಹುದು. ಶಾಸಕರ ಕುರ್ಚಿ ಮೇಲೆ ಯುವಕ ಕುಳಿತಿರುವ ಮತ್ತೊಂದು ಚಿತ್ರವೂ ಇದೆ. ಮಾರ್ಚ್‌ 28ರಂದು ಬಜೆಟ್‌ ಅಧಿವೇಶನ ಮುಗಿದ ಮೇಲೆ ಈ ಚಿತ್ರ ಎಲ್ಲೆಡೆ ಹರಿದಾಡುತ್ತಿದೆ’ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT