7

ಟ್ವಿಂಕಲ್ ಸಲಹೆ: ಬೀಚ್‌ನಲ್ಲಿ ಶೌಚಾಲಯ ನಿರ್ಮಿಸಿದ ಅಕ್ಷಯ್

Published:
Updated:
ಟ್ವಿಂಕಲ್ ಸಲಹೆ: ಬೀಚ್‌ನಲ್ಲಿ ಶೌಚಾಲಯ ನಿರ್ಮಿಸಿದ ಅಕ್ಷಯ್

ಮುಂಬೈ : ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಜುಹೂ ಬೀಚ್‌ನಲ್ಲಿ ಮೊಬೈಲ್‌ ಶೌಚಾಲಯ ನಿರ್ಮಾಣದ ಪ್ರಾಯೋಜಕತ್ವ ವಹಿಸಿದ್ದಾರೆ.

‘ಬೃಹತ್‌ ಮುಂಬೈ ಮಹಾನಗರ ಪಾಲಿಕೆಗೆ ಕಳೆದ ವಾರ ಅರ್ಜಿ ಸಲ್ಲಿಸಿದ ಅಕ್ಷಯ್‌ ಕುಮಾರ್, ಮೊಬೈಲ್‌ ಶೌಚಾಲಯ ನಿರ್ಮಾಣ ಮಾಡುವಂತೆ ಕೋರಿದ್ದರು. ಅದರ ನಿರ್ಮಾಣ ವೆಚ್ಚವನ್ನು ತಾವು ಭರಿಸುವುದಾಗಿ ತಿಳಿಸಿದ್ದರು. ನಾಲ್ಕು ದಿನಗಳ ಹಿಂದೆ ಜುಹೂ ಬೀಚ್‌ನಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಶೌಚಾಲಯಗಳ ನಿರ್ಮಾಣ ವೆಚ್ಚವಾಗಿ ₹10 ಲಕ್ಷವನ್ನು ಅಕ್ಷಯ್‌ ಕುಮಾರ್‌ ಭರಿಸಿದ್ದಾರೆ’ ಎಂದು ಸಹಾಯಕ ಆಯುಕ್ತ ಪ್ರಶಾಂತ್‌ ಗಾಯಕ್‌ವಾಡ್‌ ತಿಳಿಸಿದ್ದಾರೆ.

ಅಂಧೇರಿಯ ವೆರ್ಸೋವಾ ಬೀಚ್‌ನಲ್ಲಿ ವ್ಯಕ್ತಿಯೊಬ್ಬ ಸಾರ್ವಜನಿಕವಾಗಿ ಶೌಚ ಮಾಡುತ್ತಿದ್ದ ಚಿತ್ರವನ್ನು ಕಳೆದ ವರ್ಷ ಅಕ್ಷಯ್‌ ಕುಮಾರ್‌ ಅವರ ಪತ್ನಿ ಟ್ವಿಂಕಲ್‌ ಖನ್ನಾ ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದರು. ‘ಟಾಯ್ಲೆಟ್‌ ಏಕ್‌ ಪ್ರೇಮ್‌ ಕಥಾ ಭಾಗ– 2’ ಚಿತ್ರದ ಮೊದಲ ದೃಶ್ಯ ಇದು ಎಂಬ ಅಡಿ ಬರಹ ಹಾಕಿದ್ದರು. ಬೀಚ್‌ನಲ್ಲಿ ಮುಂಜಾನೆ ವಾಯುವಿಹಾರಕ್ಕೆ ಹೋಗಿದ್ದಾಗ ಟ್ವಿಂಕಲ್‌ ಈ ಚಿತ್ರ ಸೆರೆ ಹಿಡಿದಿದ್ದರು. ಈ ಪೋಸ್ಟ್‌ ಹಾಕಿದ ಒಂದು ತಿಂಗಳಲ್ಲಿಯೇ ನಗರವನ್ನು ಬಯಲು ಶೌಚಮುಕ್ತಗೊಳಿಸುವುದಾಗಿ ಘೋಷಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry