ಬುಧವಾರ, ಆಗಸ್ಟ್ 5, 2020
23 °C

ಒಪ್ಪೊ: ‘ಎಫ್‌ 7’ ಸ್ಮಾರ್ಟ್‌ಫೋನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಪ್ಪೊ: ‘ಎಫ್‌ 7’ ಸ್ಮಾರ್ಟ್‌ಫೋನ್‌

ಮುಂಬೈ: ಚೀನಾದ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆ ಒಪ್ಪೊ, ತನ್ನ ಹೊಸ ಮೊಬೈಲ್‌ ‘ಎಫ್‌ 7’ ಅನ್ನು ದೇಶಿ ಮಾರುಕಟ್ಟೆಗೆ ಪರಿಚಯಿಸಿದೆ.

ಗ್ರಾಹಕರನ್ನು ತಲುಪಲು ಸಂಸ್ಥೆಯು ಅಂತರ್ಜಾಲ ತಾಣಗಳಲ್ಲಿ ನಿಗದಿತ ದಿನ ಸೀಮಿತ ಕೊಡುಗೆಯ ‘ಫ್ಲ್ಯಾಶ್‌ ಸೇಲ್‌’ ನಡೆಸಲೂ ನಿರ್ಧರಿಸಿದೆ. 64 ಜಿಬಿ ಸಾಮರ್ಥ್ಯದ ಈ ಫೋನ್‌ ಬೆಲೆ ₹ 21,990 ಇದೆ.

‘ಪ್ರತಿಸ್ಪರ್ಧಿ ಸಂಸ್ಥೆಗಳ ಮಾರಾಟ ತಂತ್ರವನ್ನು ನಾವೂ ಅಳವಡಿಸಿಕೊಳ್ಳಲು ನಿರ್ಧರಿಸಿದ್ದೇವೆ. ಇ–ಕಾಮರ್ಸ್‌ ಕಂಪನಿಗಳಾದ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಜತೆ ಪಾಲುದಾರಿಕೆ ಹೊಂದಲು ಉದ್ದೇಶಿಸಲಾಗಿದೆ’ ಎಂದು ಸಂಸ್ಥೆಯ ಭಾರತದಲ್ಲಿನ ಬ್ರ್ಯಾಂಡ್‌ ನಿರ್ದೇಶಕ ವಿಲ್‌ ಯಾಂಗ್‌ ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.