ಶನಿವಾರ, ಆಗಸ್ಟ್ 8, 2020
23 °C
ಆಧಾರ್: ಜನರ ವೈಯಕ್ತಿಕ ಮಾಹಿತಿ ಸುರಕ್ಷತೆಗೆ ಯುಐಡಿಎಐ ಕ್ರಮ

ಪರ್ಯಾಯ ಗುರುತಿನ ಸಂಖ್ಯೆಗೆ ಚಾಲನೆ

ಪಿಟಿಐ Updated:

ಅಕ್ಷರ ಗಾತ್ರ : | |

ಪರ್ಯಾಯ ಗುರುತಿನ ಸಂಖ್ಯೆಗೆ ಚಾಲನೆ

ನವದೆಹಲಿ : ಆಧಾರ್‌ ಸಂಖ್ಯೆಗೆ ಪರ್ಯಾಯವಾಗಿ ಬಳಸಬಹುದಾದ ಬೀಟಾ ಆವೃತ್ತಿಯ ‘ಪರ್ಯಾಯ ಗುರುತಿನ ಸಂಖ್ಯೆ’ಗೆ (ವರ್ಚ್ಯುವಲ್ ಐಡಿ–ವಿಐಡಿ) ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ಚಾಲನೆ ನೀಡಿದೆ.

ಆಧಾರ್ ಸಂಖ್ಯೆಯ ಬದಲಿಗೆ ವಿಐಡಿಯನ್ನು ಶೀಘ್ರವೇ ಎಲ್ಲೆಡೆ ಸ್ವೀಕರಿಸಲಾಗುತ್ತದೆ ಎಂದು ಯುಐಡಿಎಐ ಭರವಸೆ ನೀಡಿದೆ.

ಆಧಾರ್‌ ಸಂಖ್ಯೆ ಹೊಂದಿರುವವರು ಯುಐಡಿಎಐ ಜಾಲತಾಣ, 'https://uidai.gov.in/'ನಿಂದ 16 ಸಂಖ್ಯೆಗಳ ಪರ್ಯಾಯ ಗುರುತಿನ ಸಂಖ್ಯೆಯನ್ನು ಪಡೆದುಕೊಳ್ಳಬಹುದು.

ಆಧಾರ್‌ ನೋಂದಣಿ ಸಂದರ್ಭದಲ್ಲಿ ಸಂಗ್ರಹಿಸಲಾಗಿರುವ ನೋಂದಣಿದಾರರ ವೈಯಕ್ತಿಕ ವಿವರಗಳ ಸುರಕ್ಷತೆಗಾಗಿ ವಿಐಡಿ ಪರಿಕಲ್ಪನೆ ರೂಪಿಸಲಾಗಿದೆ. ಯಾವುದೇ ಸೇವಾ ಸಂಸ್ಥೆಗಳಿಗೆ ವಿಐಡಿ ನೀಡಿದರೆ, ಆಧಾರ್ ಸಂಖ್ಯೆಯನ್ನು ನೀಡುವ ಅವಶ್ಯಕತೆ ಇಲ್ಲ. ಈ ಗುರುತಿನ ಸಂಖ್ಯೆಯನ್ನು ಮೊಬೈಲ್‌ಗೆ ಆಧಾರ್‌ ಜೋಡಣೆಗೆ ಬಳಸಬಹುದು. ಹಾಗೆಯೇ, ಆಧಾರ್‌ ಜೋಡಣೆ ಮಾಡಬೇಕಿರುವ ವಿವಿಧ ಸೇವೆಗಳಿಗೂ ಇದನ್ನು ನೀಡಬಹುದು. ಅಲ್ಲದೆ, ಗುರುತು, ಭಾವಚಿತ್ರ, ವಿಳಾಸ ದೃಢೀಕರಣಕ್ಕೂ ಇದನ್ನು ಬಳಸಬಹುದು.

ಸೇವಾ ಕಂಪನಿಗಳು ಈಗ ವಿಐಡಿಯನ್ನು ಸ್ವೀಕರಿಸುವುದು ಐಚ್ಛಿಕವಾಗಿದ್ದು, 2018ರ ಜೂನ್ 1ರಿಂದ ಕಡ್ಡಾಯವಾಗಲಿದೆ ಎಂದು ಪ್ರಾಧಿಕಾರ ತಿಳಿಸಿದೆ.

ಸೀಮಿತ ವೈಯಕ್ತಿಕ ವಿವರ: ಪರ್ಯಾಯ ಗುರುತಿನ ಸಂಖ್ಯೆಯ ಜೊತೆಗೆ ‘ಸೀಮಿತ–ವೈಯಕ್ತಿಕ ವಿವರ’ (ಲಿಮಿಟೆಡ್‌ ಕೆವೈಸಿ) ಎಂಬ ಮತ್ತೊಂದು ಪರಿಕಲ್ಪನೆಯನ್ನೂ ಯುಐಡಿಎಐ ರೂಪಿಸಿದೆ. ಈ ವ್ಯವಸ್ಥೆಯಲ್ಲಿ ನಿರ್ದಿಷ್ಟ ಸೇವೆ ಒದಗಿಸುವ ಸಂಸ್ಥೆಗಳಿಗೆ ಅಗತ್ಯಕ್ಕೆ ಬೇಕಾದಷ್ಟೇ ವಿವರಗಳನ್ನು ಪ್ರಾಧಿಕಾರ ನೀಡಲಿದೆ. ಮೊಬೈಲ್, ಬ್ಯಾಂಕ್ ಮತ್ತಿತರ ಸೇವೆಗಳಿಗಾಗಿ ವ್ಯಕ್ತಿಯ ಹೆಸರು, ವಿಳಾಸ ಮತ್ತು ಭಾವಚಿತ್ರ ಮಾತ್ರ ಅಗತ್ಯ ಇರುತ್ತದೆ. ವಿಐಡಿಯಲ್ಲಿ ಈ ವಿವರಗಳು ಮಾತ್ರವೇ ಇದ್ದು, ಬಯೊಮೆಟ್ರಿಕ್ ಮಾಹಿತಿ ಇರುವುದಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.