ಇ ಹರಾಜು: ಸ್ಪರ್ಧೆಯಲ್ಲಿ ಮೂರು ಕಂಪನಿಗಳು

7

ಇ ಹರಾಜು: ಸ್ಪರ್ಧೆಯಲ್ಲಿ ಮೂರು ಕಂಪನಿಗಳು

Published:
Updated:

ನವದೆಹಲಿ/ಮುಂಬೈ: ಬಿಸಿಸಿಐನ ಐತಿಹಾಸಿಕ ಇ–ಹರಾಜು ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸ್ಟಾರ್‌, ಸೋನಿ ಮತ್ತು ಜಿಯೊ ಕಂಪನಿಗಳು ಪಂದ್ಯಗಳ ಪ್ರಸಾರ ಹಕ್ಕಿಗಾಗಿ ತೀವ್ರ ಸ್ಪರ್ಧೆ ಒಡ್ಡಿವೆ.

ಈ ವರ್ಷದಿಂದ 2023ರ ವರೆಗೆ ಭಾರತ ಕ್ರಿಕೆಟ್ ತಂಡ ತವರಿನಲ್ಲಿ ಆಡುವ ಮೂರೂ ಮಾದರಿಯ ಸರಣಿಯ ಪ್ರಸಾರದ ಹಕ್ಕಿಗಾಗಿ ಹರಾಜು ಆರಂಭಗೊಂಡಿದ್ದು ಬುಧವಾರ ಮುಕ್ತಾಯಗೊಳ್ಳಲಿದೆ.

ಸದ್ಯ ಬಿಡ್‌ ಮೊತ್ತ ₹ 4442 ಕೋಟಿಗೆ ತಲುಪಿದ್ದು ದಾಖಲೆ ನಿರ್ಮಿಸುವ ಹಾದಿಯಲ್ಲಿ ಹೆಜ್ಜೆ ಹಾಕಿದೆ. 2012ರಲ್ಲಿ ಸ್ಟಾರ್ ಟಿವಿ ಒಟ್ಟು ₹ 3851 ಕೋಟಿ ಮೊತ್ತದ ಬಿಡ್‌ ಸಲ್ಲಿಸಿ ಪ್ರಸಾರ ಹಕ್ಕು ಪಡೆದಿತ್ತು.

ಐದು ವರ್ಷಗಳಲ್ಲಿ ಭಾರತ ತಂಡ ತವರಿನಲ್ಲಿ ಒಟ್ಟು 102 ಪಂದ್ಯಗಳನ್ನು ಆಡಲಿದೆ. ಇದಕ್ಕಾಗಿ ಜಾಗತಿಕ ಮಟ್ಟದ ಹರಾಜು ನಡೆಸಲು ಬಿಸಿಸಿಐ ನಿರ್ಧರಿಸಿತ್ತು. ಜಾಗತಿಕ ಟಿವಿ ಹಕ್ಕು, ಡಿಜಿಟಲ್ ಹಕ್ಕುಗಳ ಪ್ಯಾಕೇಜ್‌ ಮತ್ತು ಒಟ್ಟು ಜಾಗತಿಕ ಪ್ರಸಾರ ಹಕ್ಕು ಎಂಬ ವಿಧಾನಗಳಲ್ಲಿ ಬಿಸಿಸಿಐ ಹಕ್ಕು ನೀಡಲು ಮುಂದಾಗಿದೆ.

ಆರಂಭಿಕ ಅತ್ಯಧಿಕ ಬಿಡ್‌ ಮೊತ್ತ ₹ 4176 ಕೋಟಿ ಆಗಿತ್ತು. ನಂತರ ₹ 4201.20 ಕೋಟಿ, ₹ 4244 ಕೋಟಿ, ₹ 4303 ಕೋಟಿ ಹಾಗೂ ₹ 4328.25 ಕೋಟಿ ವರೆಗೂ ಬಿಡ್ ನಡೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry