ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷರಾಗಿ ಹಿಮಾಂತ ಶರ್ಮಾ ಆಯ್ಕೆ

7

ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷರಾಗಿ ಹಿಮಾಂತ ಶರ್ಮಾ ಆಯ್ಕೆ

Published:
Updated:

ಕಲಂಗುಟ್‌, ಗೋವಾ: ಭಾರತ ಬ್ಯಾಡ್ಮಿಂಟನ್ ಸಂಸ್ಥೆಯ ಅಧ್ಯಕ್ಷರಾಗಿ ಹಿಮಾಂತ ವಿಶ್ವ ಶರ್ಮಾ ಆಯ್ಕೆಯಾಗಿದ್ದಾರೆ. ಇಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅವರ ಅವಧಿ ನಾಲ್ಕು ವರ್ಷದ್ದಾಗಿರುತ್ತದೆ.

ಅಸ್ಸಾಂನ ಸಂಪುಟ ದರ್ಜೆ ಸಚಿವರಾಗಿರುವ ಶರ್ಮಾ ಅವರು ಕಳೆದ ವರ್ಷ ಅಖಿಲೇಶ್‌ ದಾಸ್ ಗುಪ್ತಾ ಅವರ ನಿಧನದ ನಂತರ ಮಧ್ಯಂತರ ಅವಧಿಯ ಅಧ್ಯಕ್ಷರಾಗಿದ್ದರು.

ರಾಜಸ್ಥಾನ್ ಬ್ಯಾಡ್ಮಿಂಟನ್‌ ಸಂಸ್ಥೆಯ ಕೆ.ಕೆ.ಶರ್ಮಾ ಅವರನ್ನು ಮಣಿಸಿದ ಹರಿಯಾಣ ಬ್ಯಾಡ್ಮಿಂಟನ್ ಸಂಸ್ಥೆಯ ಅಜಯ್‌ ಸಿಂಘಾನಿಯಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry