ಭಾನುವಾರ, ಡಿಸೆಂಬರ್ 15, 2019
19 °C

ಡಾ. ಜಯರಾಮ್‌ ಅವರಿಗೆ ನೇಪಾಳದ ವಾಕ್‌ ಮತ್ತು ಶ್ರವಣ ಸಂಸ್ಥೆಯ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಾ. ಜಯರಾಮ್‌ ಅವರಿಗೆ ನೇಪಾಳದ ವಾಕ್‌ ಮತ್ತು ಶ್ರವಣ ಸಂಸ್ಥೆಯ ಪ್ರಶಸ್ತಿ

ಬೆಂಗಳೂರು: ಇಲ್ಲಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್‌) ಡಾ ಎಂ. ಜಯರಾಮ್‌ ಅವರು ನೇಪಾಳದ ವಾಕ್‌ ಮತ್ತು ಶ್ರವಣ ಸಂಸ್ಥೆ ನೀಡುವ ‘ಗಂಗಾ–ಗೋದಾವರಿ ಒರೇಷನ್‌ ಆನ್‌ ಅರ್ಲಿ ಕೇರ್‌ ಆಫ್‌ ಹಿಯರಿಂಗ್‌’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ನಿಮ್ಹಾನ್ಸ್‌ನ ವಾಕ್ ರೋಗ ಲಕ್ಷಣ ಶಾಸ್ತ್ರ ಮತ್ತು ಆಡಿಯಾಲಜಿ ವಿಭಾಗದ ಹಿರಿಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿರುವ ಜಯರಾಮ್‌ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿರುವ ಮೊದಲ ಭಾರತೀಯ ವೈದ್ಯರಾಗಿದ್ದಾರೆ. ಕಠ್ಮಂಡುವಿನಲ್ಲಿ ಏಪ್ರಿಲ್‌ 5ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

60 ರಾಷ್ಟ್ರ ಮತ್ತು 20 ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಜಯರಾಮ್‌ ಅವರ ಸಂಶೋಧನಾ ವರದಿಗಳು ಪ್ರಕಟಗೊಂಡಿವೆ.

ಪ್ರತಿಕ್ರಿಯಿಸಿ (+)