7

‘ನೀವೆಷ್ಟು ದುಡ್ಡು ಇಟ್ಟಿದ್ದೀರಿ’

Published:
Updated:

ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಸುಮಾರು 1.50 ಕೋಟಿ ಮತದಾರರಿದ್ದು, ಈ ಪೈಕಿ 65 ಲಕ್ಷ ಮಾದಿಗ ಸಮುದಾಯದ ಮತದಾರರಾಗಿದ್ದಾರೆ. 85 ಕ್ಷೇತ್ರಗಳಲ್ಲಿ ಸಮುದಾಯದ ಮತದಾರರು ನಿರ್ಣಾಯಕರಾಗಿದ್ದಾರೆ ಎಂದು ಕರ್ನಾಟಕ ಮಾದಿಗರ ಸಂಘಟನೆಗಳ ಸ್ವಾಭಿಮಾನಿ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಬಿ.ಎ.ಕೇಶವಮೂರ್ತಿ ಹೇಳಿದರು.

ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮತದಾರರನ್ನು ಹೊಂದಿರುವ ಸಮುದಾಯಕ್ಕೆ ಟಿಕೆಟ್‌ ಕೇಳಲು ಹೋದರೆ ‘ನೀವೆಷ್ಟು ದುಡ್ಡು ಇಟ್ಟಿದ್ದೀರಿ’ ಎಂದು ರಾಜಕೀಯ ಪಕ್ಷದವರು ಪ್ರಶ್ನಿಸುತ್ತಾರೆ ಎಂದು ಅವರು ಮಂಗಳವಾರ ಇಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿರುವ 36 ಮೀಸಲು ಕ್ಷೇತ್ರಗಳಲ್ಲಿ ಮಾದಿಗರ ಜನಸಂಖ್ಯೆಗನುಗುಣವಾಗಿ 15 ಕ್ಷೇತ್ರದಲ್ಲಿ ಟಿಕೆಟ್‌ ನೀಡಬೇಕು ಎಂದು ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದ್ದೇವೆ. ಆದರೆ, ಆರ್ಥಿಕವಾಗಿ ಬಲಾಢ್ಯರಾಗಿರುವವರನ್ನೇ ಅಭ್ಯರ್ಥಿಗಳನ್ನಾಗಿ ಪಕ್ಷಗಳು ಆಯ್ಕೆ ಮಾಡುತ್ತೀವೆ ಎಂದರು.

ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸುವ ಮಾದಿಗ ಸಮುದಾಯದ ಅಭ್ಯರ್ಥಿಗಳಿಗೆ ಸಾಮಾನ್ಯ ವರ್ಗದ ಮತದಾರರು ಬೆಂಬಲಿಸಿದರೆ, ಸಾಮಾನ್ಯ ವರ್ಗದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಮಾದಿಗ ಮತದಾರರು ಬೆಂಬಲ ನೀಡಲಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಈ ತಂತ್ರಗಾರಿಕೆ ಅನುಸರಿಸಿದರೆ ಅದು ಫಲ ನೀಡಲಿದೆ ಎನ್ನುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry