ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಸಂತೆಯಲ್ಲಿ...

Last Updated 4 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಹೊಸ ಶೈಲಿಯ ಸ್ಕೂಟರ್

ಸುಜುಕಿ ತನ್ನ ಬಹುನಿರೀಕ್ಷಿತ ಬರ್ಗ್‌ಮ್ಯಾನ್ ಸ್ಟ್ರೀಟ್ 125 ಪ್ರೀಮಿಯಂ ಸ್ಕೂಟರ್ ಅನ್ನು ಏಪ್ರಿಲ್‌ನ ಮಧ್ಯಭಾಗದಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡುವ ತಯಾರಿಯಲ್ಲಿದೆ. ದೆಹಲಿ ವಾಹನ ಮೇಳದಲ್ಲಿ ಇತ್ತೀಚೆಗೆ ಈ ಸ್ಕೂಟರ್ ಜನರ ಗಮನ ಸೆಳೆದಿತ್ತು.

ನಗರ ಭಾಗದ ಯುವಜನರನ್ನು ಗುರಿಯಾಗಿಟ್ಟುಕೊಂಡು ಈ ಸ್ಕೂಟರ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ಕೈನೆಟಿಕ್ ಬ್ಲೇಜ್ ನಂತರ ಇದು ಭಾರತದ ಎರಡನೇ ಮ್ಯಾಕ್ಸಿ ಸ್ಕೂಟರ್ ಆಗಿದೆ.

ಸಿಗ್ನೇಚರ್ ಮಸ್ಕುಲರ್ ಡಿಸೈನ್ ಲ್ಯಾಂಗ್ವೇಜ್ ಹೊಂದಿರುವ ಈ ಸ್ಕೂಟರ್‌ ದೊಡ್ಡ ಹಾಗೂ ಶಕ್ತಿಶಾಲಿ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಕಂಫರ್ಟ್‌ ಆಗಿರಲು ಸ್ಟ್ರೆಚ್ ಆಗಿರುವ ಫುಡ್‌ಬೋರ್ಡ್, ಅಗಲ ಜಾಗ ಹೊಂದಿದೆ. ಹಿಂಭಾಗದಲ್ಲಿ, ಗ್ರ್ಯಾಬ್ ರೇಲ್‌ಗಳು, ಎಲ್‌ಇಡಿ ಟೇಲ್‌ಲೈಟ್‌ಗಳಿದ್ದು, ಅತಿ ಜಾಣತನವಾಗಿ ಸ್ಟೋರೇಜ್ ಕಂಪಾರ್ಟ್‌ಮೆಂಟ್‌ಗಳನ್ನು ಹೊಂದಿಸಲಾಗಿದೆ. 12 ಇಂಚಿನ ಫ್ರಂಟ್ ಅಲಾಯ್ ವ್ಹೀಲ್, 10 ಇಂಚಿನ ರಿಯರ್ ಅಲಾಯ್ ವೀಲ್, ಬ್ರೇಕಿಂಗ್‌ಗಾಗಿ ಮುಂಭಾಗದಲ್ಲಿ ಸಿಂಗಲ್ ಡಿಸ್ಕ್‌ ಬ್ರೇಕ್, ಎರಡು ಚಕ್ರಗಳಿಗೂ ಸಮಾನ ಬ್ರೇಕಿಂಗ್‌ಗಾಗಿ ಕಾಂಬಿನೇಷನ್ ಬ್ರೇಕಿಂಗ್ ಸಿಸ್ಟಂ ನೀಡಲಾಗಿದೆ.

124.3 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್, ಎಸ್‌ಒಎಚ್‌ಸಿ ಎಂಜಿನ್‌ನೊಂದಿಗೆ ಸಿವಿಟಿಯಿಂದ ಶಕ್ತಿ ಉತ್ಪತ್ತಿಯಾಗಲಿದೆ. ಇದು 7,000 ಆರ್‌ಪಿಎಂನಲ್ಲಿ 8.5 ಬಿಎಚ್‌ಪಿ ಹಾಗೂ 5,000ನಲ್ಲಿ 10.2 ಎನ್‌ಎಂ ಟಾರ್ಕ್ ಪೀಕ್ ಶಕ್ತಿ ಉತ್ಪಾದಿಸುತ್ತದೆ. ಲೀಟರಿಗೆ 35 ಕಿಲೋಮೀಟರ್ ಮೈಲೇಜ್ ನೀಡಬಲ್ಲದು. 85 ಕಿ.ಲೋ ಮೀಟರ್ ಗರಿಷ್ಠ ವೇಗ ಹೊಂದಿದೆ. ₹ 75,000 (ಆನ್‌ರೋಡ್– ಮಹಾರಾಷ್ಟ್ರ) ಬೆಲೆ ನಿಗದಿ ಮಾಡಲಾಗಿದೆ.

**

ಹ್ಯುಂಡೈನ ಟಕ್ಸನ್‌ಗೆ ಫೇಸ್‌ಲಿಫ್ಟ್‌

ಹೊಸತನವನ್ನು ತರುವ ದೃಷ್ಟಿಯಿಂದ ಹ್ಯುಂಡೈನ ಟಕ್ಸನ್‌ ಅನ್ನು ಫೇಸ್‌ಲಿಫ್ಟ್ ಮಾಡಲಾಗಿದೆ. ಇದೇ ಕಾರಣಕ್ಕೆ, ಸ್ಟೈಲಿಂಗ್ ಟ್ವೀಕ್ಸ್ ನೀಡಲಾಗಿದ್ದು, ಇನ್ನಷ್ಟು ಹೊಸ ಸಾಧನಗಳನ್ನು ಜೊತೆ ಸೇರಿಸಲಾಗಿದೆ.

ಹ್ಯುಂಡೈ ನ್ಯೂಯಾರ್ಕ್ ಮೋಟಾರ್ ಶೋನಲ್ಲಿ ಪ್ರದರ್ಶಿತಗೊಂಡಿದ್ದ ಈ ಪರಿಷ್ಕೃತ ಎಸ್‌ಯುವಿ, ಈ ವರ್ಷದ ಕೊನೆಗೆ ಭಾರತದಲ್ಲಿ ಬಿಡುಗಡೆಯಾಗಲಿದೆ.ಮಲ್ಟಿಪಲ್ ಡ್ರೈವರ್ ಅಸಿಸ್ಟ್ –ಅಟೊನೊಮಸ್ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಕೀಪಿಂಗ್ ಅಸಿಸ್ಟ್ ಮತ್ತು ಡ್ರೈವರ್ ಅಟೆಂಶನ್ ವಾರ್ನಿಂಗ್ ಟೆಕ್ನಾಲಜಿಯಂಥ ನೂತನ ತಂತ್ರಜ್ಞಾನಗಳು ಇದರಲ್ಲಿರಲಿವೆ. 360 ಡಿಗ್ರಿ ಕ್ಯಾಮೆರಾ, ಹೈ ಬೀಮ್ ಅಸಿಸ್ಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ ಇದ್ದು, 8.0 ಇಂಚಿನ ಇನ್ಫೊಟೇನ್ಮೆಂಟ್ ಸಿಸ್ಟಂಗೆ ಆ್ಯಪಲ್ ಕಾರ್‌ಪ್ಲೇ–ಆ್ಯಂಡ್ರಾಯ್ಡ್ ಆಟೊಗಳನ್ನು ಅಪ್‌ಡೇಟ್‌ ಮಾಡಲಾಗಿದೆ.

155ಎಚ್‌ಪಿ, 2.0- ಲೀಟರ್ ಪೆಟ್ರೋಲ್ ಎಂಜಿನ್ 185ಎಚ್‌ಪಿ, 2.0- ಲೀಟರ್ ಡೀಸೆಲ್ ಮೋಟರ್ ಹೊಂದಿದೆ. ಸ್ಪೀಡ್ ಮ್ಯಾನ್ಯುಯಲ್ ಅಥವಾ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೊಮೆಟಿಕ್ ಎರಡೂ ಆಯ್ಕೆಗಳನ್ನು ನೀಡಲಾಗಿದೆ.

ಈ ಹಿಂದೆ 2 ಡಬ್ಲುಡಿ, ಇದ್ದು, ಈ ಆಯಾಮದಲ್ಲಿ 4 ಡಬ್ಲುಡಿ ಆಗಲಿದೆ. ಹ್ಯುಂಡೈ ಸುರಕ್ಷತಾ ಕಿಟ್ ಕೂಡ ಪರಿಚಯಿಸಲಿದ್ದು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ), ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್ (ವಿಎಸ್ಎಂ), ಹಿಲ್ ಅಸಿಸ್ಟ್ ಕಂಟ್ರೋಲ್, ಡೌನ್ ಹಿಲ್ ಬ್ರೇಕ್ ಕಂಟ್ರೋಲ್, ಬ್ರೇಕ್ ಅಸಿಸ್ಟ್ ಈ ಟ್ರಿಮ್‌ಗೆ ಜೋಡಣೆಯಾಗಿವೆ.

**

ಮೇ ತಿಂಗಳಲ್ಲಿ ಯಾರಿಸ್

ಟೊಯೊಟೊ ತನ್ನ ಮಧ್ಯಮ ಗಾತ್ರದ ಹೊಸ ಸೆಡಾನ್– ಯಾರಿಸ್ ಅನ್ನು ಇದೇ ಮೇ 18ರಂದು ಪರಿಚಯಿಸಲಿದೆ. ಏಪ್ರಿಲ್ 22ರಿಂದ ಇದರ ಬುಕ್ಕಿಂಗ್ ಕೂಡ ಆರಂಭವಾಗಲಿದೆ.

ತನ್ನ ಸ್ಪರ್ಧಿಗಳೊಂದಿಗೆ ಪೈಪೋಟಿಗೆ ನಿಲ್ಲಲು ಇದರಲ್ಲಿ ಹೊಸ ವಿಭಾಗಗಳನ್ನು ಪರಿಚಯಿಸುವ ಆಲೋಚನೆಯನ್ನು ಹೊಂದಿದೆ. ಪವರ್ಡ್ ಡ್ರೈವರ್ ಸೀಟ್, ಫ್ರಂಟ್ ಪಾರ್ಕಿಂಗ್ ಸೆನ್ಸರ್, ಗೆಸ್ಚರ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, 60:40 ಸ್ಪ್ಲಿಟ್ ರಿಯರ್ ಸೀಟ್ ಜೊತೆಗೆ ಅಡ್ಜಸ್ಟಬಲ್ ಥ್ರೀ ನೆಕ್ ರಿಸ್ಟ್ರೇನ್, ರೂಫ್ ಮೌಂಟೆಡ್ ರಿಯರ್ ಏರ್‌ಕಾನ್– ಆಂಬಿಯಂಟ್ ಲೈಟಿಂಗ್ ಇವೆಲ್ಲಾ ವ್ಯವಸ್ಥೆಗಳನ್ನು ಈ ಸೆಡಾನ್ ಹೊಂದಿರುವ ಮಾಹಿತಿಯಿದೆ.

108 ಎಚ್‌ಪಿ , 1–5 ಲೀಟರ್ ಪೆಟ್ರೋಲ್ ಎಂಜಿನ್ ಇದ್ದು, ಸಿಕ್ಸ್ ಸ್ಪೀಡ್ ಮ್ಯಾನ್ಯುಯಲ್ ಅಥವಾ ಸೆವೆನ್ ಸ್ಟೆಪ್ ಸಿವಿಟಿ ಆಟೊಮೆಟಿಕ್ ಗಿಯರ್ ಬಾಕ್ಸ್‌ನೊಂದಿಗೆ ಕಾರ್ಯ ನಿರ್ವಹಿಸಲಿದೆ. ಸುರಕ್ಷತೆ ದೃಷ್ಟಿಯಿಂದ ವೀಲ್ ಡಿಸ್ಕ್‌ ಬ್ರೇಕ್‌ಗಳು, ಏಳು ಏರ್‌ಬ್ಯಾಗ್‌ಗಳು ,ಡ್ರೈವರ್ ನೀ ಏರ್‌ಬ್ಯಾಗ್, ಹಿಲ್ ಸ್ಟಾರ್ಟ್ ಅಸಿಸ್ಟ್, ಎಬಿಎಸ್, ಇಬಿಡಿ, ಇಎಸ್‌ಪಿಗಳನ್ನು ನೀಡಲಾಗಿದೆ.

ಕರ್ನಾಟಕ ಟೊಯೊಟೊ ಘಟಕದಿಂದ ಈ ಮಾದರಿಯನ್ನು ತಯಾರಿಸಲಾಗಿದ್ದು, ಇದಕ್ಕೆ ₹ 8.4 ರಿಂದ 13.5 ಲಕ್ಷ (ಎಕ್ಸ್ ಶೋರೂಂ) ಬೆಲೆ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT