ವಶಕ್ಕೆ ಪಡೆದು, ವಾಹನಗಳನ್ನು ಬಿಟ್ಟ ಅಧಿಕಾರಿಗಳು

7

ವಶಕ್ಕೆ ಪಡೆದು, ವಾಹನಗಳನ್ನು ಬಿಟ್ಟ ಅಧಿಕಾರಿಗಳು

Published:
Updated:

ಕೊಳ್ಳೇಗಾಲ: ಜೆಡಿಎಸ್ ಮತ್ತು ಬಿಎಸ್‌ಪಿ ಸಮಾವೇಶಕ್ಕೆಂದು ಬಂದಿದ್ದ ಕಾರ್ಯಕರ್ತರ ವಾಹನಗಳನ್ನು ಚುನಾವಣಾಧಿಕಾರಿಗಳು ಕಾರ್ಯಕರ್ತರ ಪ್ರತಿಭಟನೆ ಬಳಿಕ ಮಂಗಳವಾರ ರಾತ್ರಿ 10.30ರಲ್ಲಿ ವಾಪಸ್ ನೀಡಿದರು.ಅನುಮತಿ ಪಡೆದಿರಲಿಲ್ಲ ಎಂಬ ಕಾರಣ ನೀಡಿ ಸುಮಾರು 150 ಬೈಕ್ ಹಾಗೂ 10 ಕಾರುಗಳನ್ನು ಚುನಾವಣಾ ಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದರಿಂದ ಆಕ್ರೋಶಗೊಂಡ ನೂರಾರು ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂದೆ ಜಮಾವಣೆಗೊಂಡು ಪ್ರತಿಭಟನೆಗೆ ಇಳಿದರು. ಈ ವೇಳೆ ಕಾರಿನೊಳಗೆ ಕುಳಿತ ಕುಮಾರಸ್ವಾಮಿ ಸಹ ಪ್ರತಿಭಟನೆಗೆ ಸಾಥ್ ನೀಡಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಅಧಿಕಾರಿಗಳು ಕೊನೆಗೆ ವಶಪಡಿಸಿಕೊಂಡಿದ್ದ ವಾಹನಗಳ ಪೈಕಿ ಬಹುತೇಕ ವಾಹನಗಳನ್ನು ಕಾರ್ಯಕರ್ತರಿಗೆ ವಾಪಸ್ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry