ಶುಕ್ರವಾರ, ಡಿಸೆಂಬರ್ 13, 2019
19 °C

ಪ್ರಕಾಶ್ ಪಡುಕೋಣೆ ಐಡಿಬಿಐ ಬ್ಯಾಂಕ್‌ ಖಾತೆ ಸ್ಥಗಿತ ಪ್ರಕರಣ: ₹20 ಲಕ್ಷ ಬಾಂಡ್ ನೀಡಿ ಖಾತೆ ಬಳಕೆಗೆ ಹೈಕೋರ್ಟ್‌ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಕಾಶ್ ಪಡುಕೋಣೆ ಐಡಿಬಿಐ ಬ್ಯಾಂಕ್‌ ಖಾತೆ ಸ್ಥಗಿತ ಪ್ರಕರಣ: ₹20 ಲಕ್ಷ ಬಾಂಡ್ ನೀಡಿ ಖಾತೆ ಬಳಕೆಗೆ ಹೈಕೋರ್ಟ್‌ ಸೂಚನೆ

ಬೆಂಗಳೂರು: ಮಾಜಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಖಾತೆ ಸ್ಥಗಿತಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ₹20 ಲಕ್ಷ ಬಾಂಡ್ ನೀಡುವಂತೆ ಬುಧವಾರ ಹೈಕೋರ್ಟ್ ಆದೇಶಿಸಿದೆ.

ವಿಕ್ರಂ ಇನ್‌ವೆಸ್ಟ್‌ಮೆಂಟ್‌ ಕಂಪನಿಯಲ್ಲಿ ಪಡುಕೋಣೆ ಹೂಡಿಕೆ ಮಾಡಿದ್ದರು.

ಅವರ ಬ್ಯಾಂಕ್‌ ಖಾತೆಗೆ ₹19 ಲಕ್ಷ ಹೆಚ್ಚುವರಿಯಾಗಿ ವರ್ಗಾವಣೆ ಆಗಿತ್ತು. ಈ ಸಂಬಂಧ ಬನಶಂಕರಿ ಪೊಲೀಸರು ಮಲ್ಲೇಶ್ವರದಲ್ಲಿರುವ ಐಡಿಬಿಐ ಬ್ಯಾಂಕ್‌ನ ಪಡುಕೋಣೆ‌ ಖಾತೆ ವ್ಯವಹಾರವನ್ನು ಸ್ಥಗಿತಗೊಳಿಸಿದ್ದರು.

ಇದನ್ನು ಪ್ರಶ್ನಿಸಿ ಪ್ರಕಾಶ್ ಪಡುಕೋಣೆ, ಪತ್ನಿ ಉಜಾಲಾ ಪಡುಕೋಣೆ, ಪುತ್ರಿ ಅನಿಷಾ ಪಡುಕೋಣೆ ಹೈಕೋರ್ಟ್ ಮೇಟ್ಟಿಲೇರಿದ್ದರು.

ಸೆಷನ್ಸ್ ಕೋರ್ಟ್‌ಗೆ ಭದ್ರತೆ ರೂಪದಲ್ಲಿ ಬಾಂಡ್ ಸಲ್ಲಿಸುವಂತೆ ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠ ಸೂಚಿಸಿದೆ. ಭದ್ರತಾ ಠೇವಣಿ ಇಟ್ಟು ಖಾತೆ ಬಳಕೆಗೆ ಅವಕಾಶ ನೀಡಿದೆ.

ಪ್ರತಿಕ್ರಿಯಿಸಿ (+)