ಶುಕ್ರವಾರ, ಡಿಸೆಂಬರ್ 13, 2019
19 °C

ರೌಡಿಶೀಟರ್‌ಗಳ ಪರೇಡ್, ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೌಡಿಶೀಟರ್‌ಗಳ ಪರೇಡ್, ಎಚ್ಚರಿಕೆ

 

ಹುಣಸೂರು: ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಸಮಾಜದ ಶಾಂತಿ– ಸುವ್ಯವಸ್ಥೆಗೆ ಭಂಗ ಬಾರದಂತೆ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ರೌಡಿಶೀಟರ್‌ಗಳಿಗೆ ಸಿಪಿಐ ಗಂಗಾಧರಪ್ಪ ಎಚ್ಚರಿಕೆ ನೀಡಿದರು.ನಗರದ ಡಿವೈಎಸ್‌ಪಿ ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ರೌಡಿಶೀಟರ್‌ ಪರೇಡ್‌ನಲ್ಲಿ ಅವರು ಮಾತನಾಡಿದರು.ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿ ಕೊಂಡು ಸಮಾಜದಲ್ಲಿ ಅಶಾಂತಿ ಮೂಡಿಸುವ ಕೆಲಸದಲ್ಲಿ ತೊಡಗಿದರೆ ಕಠಿಣ ಕ್ರಮ ತೆಗೆದುಕೊಳ್ಳ ಲಾಗುವುದು. ಇತರರ ಮಾತಿನ ಮಣೆಗೆ ಬಲಿಯಾಗಿ ತೊಂದರೆಗೆ ಸಿಲುಕಬೇಡಿ. ನ್ಯಾಯಾಲಯದಲ್ಲಿ ನಡೆದಿರುವ ವಿಚಾರಣೆಗೆ ಹಾಜರಾಗಿ ಪ್ರಕರಣದಿಂದ ಹೊರ ಬಂದು ಇತರರಂತೆ ಜೀವನ ರೂಪಿಸಿಕೊಳ್ಳಿ ಎಂದರು.ಚುನಾವಣಾ ಘರ್ಷಣೆಗಳಲ್ಲಿ ಗುರುತಿಸಿಕೊಂಡು ವಾರೆಂಟ್ ಪಡೆದಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ. ಸಾಧ್ಯವಾದಷ್ಟು ಒಳ್ಳೆಯವರಂತೆ ನಡೆದು ಕೊಂಡು ರೌಡಿಶೀಟರ್‌ ಪಟ್ಟಿಯಿಂದ ಹೊರಬನ್ನಿ ಎಂದು ಸಲಹೆ ನೀಡಿದರು.ಪಿ.ಎಸ್‌.ಐ ಮಹೇಶ್‌ ಮತ್ತು ಆನಂದ್‌ ಹಾಜರಿದ್ದರು.

ಪ್ರತಿಕ್ರಿಯಿಸಿ (+)