ಗುರುವಾರ , ಡಿಸೆಂಬರ್ 12, 2019
20 °C

ಮೌಢ್ಯ ನಿಷೇಧ ಮಸೂದೆ ತಂದವರು; ಕೈಯಲ್ಲಿ ನಿಂಬೆ ಹಣ್ಣು ಹಿಡಿದರು: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕುಟುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೌಢ್ಯ ನಿಷೇಧ ಮಸೂದೆ ತಂದವರು; ಕೈಯಲ್ಲಿ ನಿಂಬೆ ಹಣ್ಣು ಹಿಡಿದರು: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕುಟುಕು

ಬೆಂಗಳೂರು: ಹಿಂದು ಸಂಪ್ರದಾಯಗಳನ್ನು ಕಳಂಕಿತಗೊಳಿಸಲು ಮೌಢ್ಯ ನಿಷೇಧ ಮಸೂದೆ ತಂದವರು ಕೈಯಲ್ಲಿ ನಿಂಬೆ ಹಣ್ಣು ಹಿಡಿದು ಪ್ರಚಾರ ಮಾಡುತ್ತಿದ್ದಾರೆ. ಅವರೇ ಬೂಟಾಟಿಕೆ ಸಿದ್ದರಾಮಯ್ಯ ಎಂದು ಬಿಜೆಪಿ ಕುಟುಕಿದೆ.

ರಾಷ್ಟ್ರೀಯ ನಾಯಕರೊಂದಿಗೆ ಯಾತ್ರೆ ನಡೆಸಿ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು, ಸಾಮಾಜಿಕ ಮಾಧ್ಯಮಗಳಲ್ಲಿಯೂ ವಾಕ್ಸಮರ ಮುಂದುವರಿಸಿವೆ. ಸಿಎಂ ಸಿದ್ದರಾಮಯ್ಯ ಅವರು ಪ್ರಚಾರದ ವೇಳೆ ನಿಂಬೆ ಹಣ್ಣು ಹಿಡಿದಿರುವುದನ್ನು ಗುರುತಿಸಿರುವ ಬಿಜೆಪಿ, ಇದು ಸಿದ್ದರಾಮಯ್ಯ ಅವರು ಅನುಸರಿಸುತ್ತಿರುವ ಮೌಢ್ಯ ಎನ್ನುವಂತೆ ಟ್ವೀಟಿಸಿದೆ.

‘ಗ್ರಾಮೀಣ ಭಾಗದ ಜನರು ಕೈಗೆ ನಿಂಬೆ ಹಣ್ಣು ನೀಡಿ ಸ್ವಾಗತಿಸುತ್ತಾರೆ. ಇದು ಮೂಢನಂಬಿಕೆಯಲ್ಲ ಎಂಬುದು ಎಲ್ಲ ಕನ್ನಡಿಗರಿಗೂ ತಿಳಿದಿದೆ. ಮೌಢ್ಯ ನಿಷೇಧ ಮಸೂದೆ ಅನುಮೋದನೆಗೊಂಡು ಕಾನೂನಾಗಿದೆ. ಅದು ಹಿಂದು ಸಂಪ್ರದಾಯಗಳನ್ನು ಕೀಳಾಗಿಸಿಲ್ಲ. ಟ್ವೀಟಿಸುವ ಮುನ್ನ ಕರ್ನಾಟಕದ ಬಗ್ಗೆ ತಿಳಿದುಕೊಳ್ಳಿ’ ಎಂದು ಸಿಎಂ ಪ್ರತ್ಯುತ್ತರ ನೀಡಿದ್ದಾರೆ.

ಮೌಢ್ಯ ನಿಷೇಧ ಕಾನೂನಿನ ಕುರಿತು ನೀವೇನಾದರೂ ‘ಸುಳ್ಳು ಸುದ್ದಿ’ ಹರಿಯಬಿಟ್ಟರೆ, ನಿಮ್ಮ ವಿರುದ್ಧ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವೆ ಸ್ಮೃತಿ ಇರಾನಿ ಸುತ್ತೋಲೆ ಮೂಲಕ ಸದೆ ಬಡೆಯುತ್ತಾರೆ! ಎಂದು ಸಿದ್ದರಾಮಯ್ಯ ಅಣಕಿಸಿದ್ದಾರೆ.

ಪ್ರತಿಕ್ರಿಯಿಸಿ (+)