ಅಂಬೇಡ್ಕರ್‌ಗೆ ನಮ್ಮಿಂದ ಗರಿಷ್ಠ ಗೌರವ: ಮೋದಿ

7

ಅಂಬೇಡ್ಕರ್‌ಗೆ ನಮ್ಮಿಂದ ಗರಿಷ್ಠ ಗೌರವ: ಮೋದಿ

Published:
Updated:

ನವದೆಹಲಿ: ‘ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನಾವು ಗೌರವಿಸಿದಷ್ಟು ಮತ್ಯಾರೂ ಗೌರವಿಸಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಲ್ಲಿ ನೂತನವಾಗಿ ನಿರ್ಮಿಸಿರುವ ಸಂಸದರ ಭವನವನ್ನು ಉದ್ಘಾಟಿಸಿ ಅವರು ಮಾತನಾಡಿದ್ದಾರೆ.

‘ಬಾಬಾಸಾಹೇಬ್ ಅವರು ತೋರಿಸಿಕೊಟ್ಟ ಹಾದಿಯಲ್ಲಿ ನಾವು ನಡೆಯುತ್ತಿದ್ದೇವೆ. ಸಾಮರಸ್ಯ ಮತ್ತು ಸಹಬಾಳ್ವೆ ಅಂಬೇಡ್ಕರ್‌ ಅವರ ಸಿದ್ಧಾಂತಗಳ ಮೂಲಅಂಶಗಳಾಗಿದ್ದವು. ಅವರನ್ನು ಅನುಸರಿಸುತ್ತಿರುವ ನಾವು ಬಡವರಲ್ಲೇ ಅತ್ಯಂತ ಬಡವರಿಗಾಗಿ ದುಡಿಯುತ್ತಿದ್ದೇವೆ’ ಎಂದು ಹೇಳಿದ್ದಾರೆ.

‘ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲು ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ನಿರ್ಧರಿಸಿತ್ತು. ಅಂಬೇಡ್ಕರ್ ಅವರು ತಮ್ಮ ಕೊನೆಯ ದಿನಗಳನ್ನು ಕಳೆದಿದ್ದ ‘ಅಲಿಪುರ್ ರೋಡ್ ಹೌಸ್‌’ ಅನ್ನು ಸ್ಮಾರಕವಾಗಿ ಬದಲಿಸಲು ನಿರ್ಧರಿಸಿತ್ತು. ಆದರೆ ನಂತರ ಬಂದ ಸರ್ಕಾರಗಳು ಸ್ಮಾರಕದ ಕಾಮಗಾರಿಯನ್ನು ಕಡೆಗಣಿಸಿದವು. ಆದರೆ ನಾವು ಸ್ಮಾರಕವನ್ನು ಪೂರ್ಣಗೊಳಿಸಿದ್ದೇವೆ. ಆ ಸ್ಮಾರಕ ಅಂದರೆ, ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರವನ್ನು ಇದೇ 13ರಂದು ದೇಶಕ್ಕೆ ಸಮರ್ಪಿಸಲಿದ್ದೇವೆ’ ಎಂದು ಅವರು ಘೋಷಿಸಿದರು.

‘ಎಲ್ಲ ಪಕ್ಷಗಳೂ ಅಂಬೇಡ್ಕರ್ ಅವರ ಹೆಸರನ್ನು ರಾಜಕೀಯಕ್ಕೆ ಬಳಸಿಕೊಂಡಿವೆ. ಆದರೆ ನಮ್ಮನ್ನು ಬಿಟ್ಟು ಮತ್ಯಾವ ಪಕ್ಷವೂ ಸಂವಿಧಾನ ಶಿಲ್ಪಿಗೆ ಸಲ್ಲಬೇಕಾಗಿದ್ದ ಗೌರವವನ್ನು ಸಲ್ಲಿಸಿಲ್ಲ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry