ಮಂಗಳವಾರ, ಡಿಸೆಂಬರ್ 10, 2019
26 °C

ಫ್ಲಿಪ್‌ಕಾರ್ಟ್‌: ಹೂಡಿಕೆಗೆ ಪೈಪೋಟಿ

Published:
Updated:
ಫ್ಲಿಪ್‌ಕಾರ್ಟ್‌: ಹೂಡಿಕೆಗೆ ಪೈಪೋಟಿ

ನವದೆಹಲಿ: ಬೆಂಗಳೂರಿನ ಇ–ಕಾಮರ್ಸ್‌ ದೈತ್ಯ ಸಂಸ್ಥೆ ಫ್ಲಿಪ್‌ಕಾರ್ಟ್‌ನಲ್ಲಿ ಹಣ ಹೂಡಿಕೆ ಮಾಡಲು ಬಹುರಾಷ್ಟ್ರೀಯ ಆನ್‌ಲೈನ್‌ ಮಾರುಕಟ್ಟೆ ಸಂಸ್ಥೆಗಳ ಮಧ್ಯೆ ತೀವ್ರ ಪೈಪೋಟಿ ನಡೆದಿದೆ.

ವಾಲ್‌ಮಾರ್ಟ್‌ ಸಂಸ್ಥೆಯು ಹಣ ತೊಡಗಿಸಲು ಮುಂದಾಗಿರುವಾಗ ಅಮೆಜಾನ್‌ ಕೂಡ ಫ್ಲಿಪ್‌ಕಾರ್ಟ್ ಖರೀದಿಸಲು ಆಸಕ್ತಿ ತೋರಿಸಿದೆ. ವಾಲ್‌ಮಾರ್ಟ್‌ನ ಹೂಡಿಕೆ ಯೋಜನೆ ಅಂತಿಮ ಹಂತದಲ್ಲಿ ಇರುವಾಗಲೇ, ಅಮೆಜಾನ್‌ ಪ್ರಸ್ತಾವವನ್ನೂ ಫ್ಲಿಪ್‌ಕಾರ್ಟ್‌ ಪರಿಶೀಲಿಸುತ್ತಿದೆ. ವಾಲ್‌ಮಾರ್ಟ್‌ ₹ 1.30 ಲಕ್ಷ ಕೋಟಿ ತೊಡಗಿಸಲು ಮುಂದಾಗಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ₹ 16,250 ಕೋಟಿಗಳಷ್ಟು ಬಂಡವಾಳ ತೊಡಗಿಸಿರುವ ಜಪಾನಿನ ಸಾಫ್ಟ್‌ಬ್ಯಾಂಕ್‌, ಆರಂಭದಲ್ಲಿ ವಾಲ್‌ಮಾರ್ಟ್‌ನ ಹಣ ಹೂಡಿಕೆಗೆ ಆಕ್ಷೇಪ ದಾಖಲಿಸಿತ್ತು. ಈಗ ಅದು ತನ್ನ ನಿಲುವು ಸಡಿಲಿಸಿದೆ.

ಭಾರತದ ರಿಟೇಲ್‌ ಮಾರುಕಟ್ಟೆಯಲ್ಲಿ ವಹಿವಾಟು ವಿಸ್ತರಿಸುವ ಮತ್ತು ಪ್ರತಿಸ್ಪರ್ಧಿ ಸಂಸ್ಥೆ ಅಮೆಜಾನ್‌ಗೆ ತೀವ್ರ ಪೈಪೋಟಿ ನೀಡುವ ಉದ್ದೇಶದಿಂದ ಅಮೆರಿಕದ ವಾಲ್‌ಮಾರ್ಟ್‌, ಫ್ಲಿಪ್‌ಕಾರ್ಟ್‌ನಲ್ಲಿ ಹಣ ಹೂಡಲು ಆಸಕ್ತಿ ತಳೆದಿದೆ. ಈ ಪ್ರಕ್ರಿಯೆ ಇನ್ನೂ ಅಂತಿಮಗೊಳ್ಳಬೇಕಾಗಿದೆ.

ಪ್ರತಿಕ್ರಿಯಿಸಿ (+)