ಸೋಮವಾರ, ಜೂಲೈ 13, 2020
22 °C

ನೋಕಿಯಾ : ಮೂರು ಹೊಸ ಮೊಬೈಲ್‌ಗಳು

ಪಿಟಿಐ Updated:

ಅಕ್ಷರ ಗಾತ್ರ : | |

ನೋಕಿಯಾ : ಮೂರು ಹೊಸ ಮೊಬೈಲ್‌ಗಳು

ನವದೆಹಲಿ: ನೋಕಿಯಾ ಬ್ರ್ಯಾಂಡ್‌ ಮೊಬೈಲ್‌ಗಳನ್ನು ಮಾರಾಟ ಮಾಡುವ ಎಚ್‌ಎಂಡಿ ಗ್ಲೋಬಲ್‌, ಭಾರತದಲ್ಲಿ ತನ್ನ ವಹಿವಾಟು ವಿಸ್ತರಿಸಲು ನಿರ್ಧರಿಸಿದ್ದು, ಮೂರು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ.

ನೋಕಿಯಾ 6, ನೋಕಿಯಾ 7 ಪ್ಲಸ್‌ ಮತ್ತು ನೋಕಿಯಾ 8 ಸಿರೊಕ್ಕೊ ಸ್ಮಾರ್ಟ್‌ಫೋನ್‌ಗಳ ಬೆಲೆ ₹ 16,999 ರಿಂದ ₹ 49,999ರವರೆಗೆ ಇದೆ.

‘ಭಾರತೀಯರು ನೋಕಿಯಾ ಬ್ರ್ಯಾಂಡ್‌ ಅನ್ನು ಬಹುವಾಗಿ ಮೆಚ್ಚಿಕೊಂಡಿದ್ದು, ಅದನ್ನು ಮುಂದುವರೆಸಿಕೊಂಡು ಹೋಗಲು ಆದ್ಯತೆ ನೀಡಲಾಗುವುದು. ದೇಶಿ ಮಾರುಕಟ್ಟೆಯಲ್ಲಿನ ವಹಿವಾಟನ್ನು ಶೇ 10ರಿಂದ ಶೇ 20ಕ್ಕೆ ಹೆಚ್ಚಿಸಲಾಗುವುದು’ ಎಂದು ಎಚ್‌ಎಂಡಿ ಗ್ಲೋಬಲ್‌ನ ಭಾರತ ವಹಿವಾಟಿನ ಉಪಾಧ್ಯಕ್ಷ ಅಜಯ್‌ ಮೆಹ್ತಾ ಹೇಳಿದ್ದಾರೆ.

ಹಿಂದೊಮ್ಮೆ ದೇಶಿ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದ್ದ ಸಂಸ್ಥೆಯು 2012ರಿಂದ ತನ್ನ ಮಹತ್ವ ಕಳೆದುಕೊಳ್ಳಲು ಆರಂಭಿಸಿತು. ಡ್ಯುಯೆಲ್‌ ಸಿಮ್‌ ಮತ್ತು ಸ್ಪರ್ಶ ಪರದೆ ಸ್ಮಾರ್ಟ್‌ಫೋನ್‌ಗಳ ತಯಾರಿಕೆಗೆ ತ್ವರಿತವಾಗಿ  ಸ್ಪಂದಿಸದ ಕಾರಣಕ್ಕೆ ಗ್ರಾಹಕರಿಂದ ದೂರವಾಗತೊಡಗಿತ್ತು. ಎಚ್‌ಎಂಡಿ ಗ್ಲೋಬಲ್‌ ಸಂಸ್ಥೆ ಮೂಲಕ ಈಗ ಮತ್ತೆ ವಹಿವಾಟು ಹೆಚ್ಚಿಸಲು ಮುಂದಾಗಿದೆ.

ಗೂಗಲ್‌ ಆಂಡ್ರಾಯ್ಡ್‌ ಒನ್‌ ಸೌಲಭ್ಯ ಒಳಗೊಂಡಿರುವ ಈ ಸ್ಮಾರ್ಟ್‌ಫೋನ್‌ಗಳು ಈ  ತಿಂಗಳಾಂತ್ಯಕ್ಕೆ  ಖರೀದಿಗೆ ಲಭ್ಯವಾಗಲಿವೆ.

**

2017ರಲ್ಲಿನ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಪಾಲು

ಮೊಬೈಲ್‌ ಸಂಸ್ಥೆ   ಪಾಲು (%)

ಸ್ಯಾಮ್ಸಂಗ್‌  24.7

ಶಿಯೋಮಿ  20.9

ವಿವೊ 9.4

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.