ದಿನದ ಆರಂಭದಲ್ಲಿ ಸಂವೇದಿ ಸೂಚ್ಯಂಕವು ಸಕಾರಾತ್ಮಕವಾಗಿಯೇ ವಹಿವಾಟು ಆರಂಭಿಸಿತು. ಒಂದು ಹಂತದಲ್ಲಿ ದಿನದ ಗರಿಷ್ಠ ಮಟ್ಟವಾದ 33,505 ಅಂಶಗಳಿಗೂ ಏರಿಕೆ ಕಂಡಿತ್ತು. ಆದರೆ, ಮಧ್ಯಾಹ್ನದ ವೇಳೆಗೆ ಪೇಟೆಯಲ್ಲಿ ಹಠಾತ್ತಾಗಿ ಮಾರಾಟ ಒತ್ತಡ ಕಂಡು ಬಂದಿತು. ಇದರಿಂದಾಗಿ ಸೂಚ್ಯಂಕವು ಕನಿಷ್ಠ ಮಟ್ಟವಾದ 32,972 ಅಂಶಗಳಿಗೆ ಕುಸಿಯಿತು. ಅಂತಿಮವಾಗಿ 351.56 ಅಂಶಗಳಿಗೆ (ಶೇ 1.05) ಎರವಾಗಿ 33,019 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ಮಾರ್ಚ್ 23 ನಂತರದ ದಿನದ ಅತಿದೊಡ್ಡ ಕುಸಿತ ಇದಾಗಿದೆ. ಅಂದು ಸೂಚ್ಯಂಕ 409 ಅಂಶಗಳಿಗೆ ಎರವಾಗಿತ್ತು.