ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಹೊಸ ಅತಿಥಿ

7

ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಹೊಸ ಅತಿಥಿ

Published:
Updated:
ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಹೊಸ ಅತಿಥಿ

ಆನೇಕಲ್‌: ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಮೈಸೂರು ಮೃಗಾಲಯದಿಂದ ‘ಗೌರಿ’ ಎಂಬ ಜಿರಾಫೆ ಕರೆ ತಂದಿದ್ದು, ನೂತನ ಅತಿಥಿ ಕಂಡು ಪ್ರವಾಸಿಗರು ಸಂತಸಗೊಂಡಿದ್ದಾರೆ.

ಇನ್ಫೊಸಿಸ್ ಪ್ರತಿಷ್ಠಾನದ ವತಿಯಿಂದ ನಿರ್ಮಿಸಲಾಗಿರುವ ಆವರಣದಲ್ಲಿ ಇದನ್ನು ಬಿಡಲಾಗಿದೆ. ಸಾಮಾನ್ಯವಾಗಿ ಉದ್ಯಾನದಲ್ಲಿ ಒಂಟಿ ಪ್ರಾಣಿಗಳನ್ನು ಬಿಡುವುದಿಲ್ಲ. ಗೌರಿಗೆ ಜೊತೆಯಾಗಿ ಗಂಡು ಜಿರಾಫೆಯೊಂದನ್ನು ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕೆಂದು ಪ್ರಾಣಿ ಪ್ರಿಯರು ಮನವಿ ಮಾಡಿದ್ದಾರೆ.

ಜಿರಾಫೆ ನಿರ್ವಹಣೆ ತರಬೇತಿ ಪಡೆಯಲು ಇಲ್ಲಿನ ಪ್ರಭುಶಂಕರ ಮತ್ತು ರಾಮಸ್ವಾಮಿ ಎಂಬ ಪ್ರಾಣಿಪಾಲಕರನ್ನು ಮೈಸೂರಿನ ಮೃಗಾಲಯಕ್ಕೆ ಎರಡು ತಿಂಗಳ ಕಾಲ ನಿಯೋಜಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry