ಮಂಗಳವಾರ, ಆಗಸ್ಟ್ 4, 2020
26 °C
ಚುನಾವಣಾ ಆಯೋಗಕ್ಕೆ ಎಂಇಎಸ್‌ ಮುಖಂಡರಿಂದ ಮನವಿ

ಮತದಾರರ ಪಟ್ಟಿ:ಮರಾಠಿಯಲ್ಲಿ ಕೊಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತದಾರರ ಪಟ್ಟಿ:ಮರಾಠಿಯಲ್ಲಿ ಕೊಡಿ

ಬೆಳಗಾವಿ: ಮತದಾರರ ಪಟ್ಟಿಯನ್ನು ಮರಾಠಿ ಭಾಷೆಯಲ್ಲಿ ನೀಡುವಂತೆ ಆಗ್ರಹಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡರು ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಮನವಿ ಸಲ್ಲಿಸಿದರು.‘ಮತದಾನ ಪ್ರತಿಯೊಬ್ಬ ಮತದಾರರ ಹಕ್ಕಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವುದಕ್ಕೆ ಚುನಾವಣಾ ಆಯೋಗವು ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ.ಇದಕ್ಕೆ ಪೂರಕವಾಗಿ, ಗಡಿಯಲ್ಲಿ ವಾಸಿಸುತ್ತಿರುವ ಭಾಷಾ ಅಲ್ಪಸಂಖ್ಯಾತರಾದ ನಮಗೆ ಮರಾಠಿಯಲ್ಲಿ  ಪಟ್ಟಿಯನ್ನು ಕೊಡಬೇಕು.ಅಂತೆಯೇ ದಾಖಲೆಗಳನ್ನೂ ಒದಗಿಸಬೇಕು’ ಎಂದು ಕೋರಿದರು.

‘ಆಯೋಗವು ಕನ್ನಡದಲ್ಲಿ ಮಾತ್ರವೇ ಪಟ್ಟಿ ಪ್ರಕಟಿಸಿದೆ. ಇದರಿಂದ ಮರಾಠಿ ಭಾಷಿಕರಿಗೆ ತೊಂದರೆಯಾಗಿದೆ. ಪಟ್ಟಿಯಲ್ಲಿ ಹೆಸರು ಇದೆಯೇ, ಇಲ್ಲವೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಪರದಾಡುವಂತಾಗಿದೆ. ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಸೇರ್ಪಡೆ ಮೊದಲಾದವುಗಳನ್ನು ಕೈಗೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಇದು ಮತದಾನ ಪ್ರಮಾಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ’ ಎಂದು ತಿಳಿಸಿದರು.

‘ಹಿಂದಿನ ಚುನಾವಣೆಗಳಲ್ಲಿ ಗಮನಿಸಿದಂತೆ, ನಾಮಪತ್ರ ಅರ್ಜಿ ನಮೂನೆ ಹಾಗೂ ಇತರ ಪ್ರಮುಖ ದಾಖಲೆಗಳು ಮರಾಠಿಯಲ್ಲಾಗಲೀ ಅಥವಾ ಇಂಗ್ಲಿಷ್‌ನಲ್ಲಾಗಲೀಲಭ್ಯವಾಗಿರಲಿಲ್ಲ. ಇದು, ಈ ವರ್ಷವೂ ಮುಂದುವರಿಯದಂತೆ ನೋಡಿಕೊಳ್ಳಬೇಕು. ಮರಾಠಿ ಭಾಷಿಕರೂ ಚುನಾವಣೆಯಲ್ಲಿ ಸಕ್ರಿಯ

ವಾಗಿ ಭಾಗವಹಿಸುವಂತಾಗಲು ಅನುವು ಮಾಡಿಕೊಡಬೇಕು. ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಮಾಹಿತಿ ಒದಗಿಸಬೇಕು’ ಎಂದು ಒತ್ತಾಯಿಸಿದರು.‘ಗಡಿ ಭಾಗದಲ್ಲಿ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸುವುದಕ್ಕಾಗಿ, ಕೇಂದ್ರ ಸರ್ಕಾರಿ ಅಧಿಕಾರಿಗಳನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಿಸಬೇಕು’ ಎಂದು ಆಗ್ರಹಿಸಿದರು.

ತಾಲ್ಲೂಕು ‍ಪಂಚಾಯ್ತಿ ಸದಸ್ಯ ಸುನೀಲ್‌ ಅಸ್ಟೇಕರ, ನಗರಪಾಲಿಕೆ ಸದಸ್ಯ ಮೋಹನ್‌ ಬೆಳಗುಂದಕರ, ಎಂಇಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಮಾತೃ ಝಂಗ್ರುಚೆ, ಕಾರ್ಯದರ್ಶಿ ಮನೋಜ್‌ ಪಾವಸೆ, ಕಾರ್ಯಾಧ್ಯಕ್ಷ ವೈ.ಬಿ. ಚೌಗುಲೆ, ಎಪಿಎಂಸಿ ಅಧ್ಯಕ್ಷ ಎ. ಜಾಧವ್‌ ಇದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.