ಕನಸು ಸಾಕಾರಗೊಳಿಸಲು ಪ್ರಯತ್ನ ಅಗತ್ಯ: ವಿದ್ಯಾರ್ಥಿಗಳಿಗೆ ಸಲಹೆ

7

ಕನಸು ಸಾಕಾರಗೊಳಿಸಲು ಪ್ರಯತ್ನ ಅಗತ್ಯ: ವಿದ್ಯಾರ್ಥಿಗಳಿಗೆ ಸಲಹೆ

Published:
Updated:

ಬಳ್ಳಾರಿ: ‘ವಿದ್ಯಾರ್ಥಿಗಳು ಸಾಧನೆಗಳನ್ನು ಕನಸಿಗೆ ಸೀಮಿತಗೊಳಿಸದೆ, ಅವುಗಳನ್ನು ಸಾಕಾರಗೊಳಿಸುವಲ್ಲಿ ಪ್ರಯತ್ನ ಪಡಬೇಕು’ ಎಂದು ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಹಾಲಿನ ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕ ಪ್ರೊ.ಬುಕ್ಕ ಮಲ್ಲಿಕಾರ್ಜುನ ಪ್ರತಿಪಾದಿಸಿದರು. ನಗರದ ಅಲ್ಲಂ ಕರಿಬಸಪ್ಪ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜೆಮೆಂಟ್ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪಾಂಚಜನ್ಯ–2018 ಅಂತರ್‌ ಪದವಿ ಕಾಲೇಜು ಮಟ್ಟದ ಉತ್ಸವ ಉದ್ಘಾಟಿಸಿ ಮಾತನಾಡಿದರು.‘ವಿದ್ಯಾರ್ಥಿಗಳು ಇಚ್ಛಾಶಕ್ತಿ, ಕಲ್ಪನಾ ಶಕ್ತಿ, ಕಠಿಣ ಪರಿಶ್ರಮವನ್ನು ಅಳವಡಿಸಿಕೊಳ್ಳಬೇಕು’ ಎಂದರು.

ವೀರಶೈವ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಎಚ್.ಎಂ.ವೀರಭದ್ರಶರ್ಮ ಮಾತನಾಡಿದರು. ಡಾ.ಕೆ.ಟಿ.ಗೋಪಿ ಪ್ರಾಸ್ತಾವಿಕ ಮಾತನಾಡಿದರು.ಸಂಘದ ಕಾರ್ಯದರ್ಶಿಗಳಾದ ಟಿ.ಕ್ರೊಟ್ರಪ್ಪ, ಸಹಕಾರ್ಯದರ್ಶಿಗಳಾದ ಕೆ.ವೀರೇಶಗೌಡ , ಕೆ.ವಿ.ಬಸವರಾಜ ಕೊರಲಗುಂದಿ, ಬಿ.ಸಂಪತ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry