ಕಾವೇರಿ ಪ್ರತಿಭಟನೆ: ತಮಿಳುನಾಡಿನಲ್ಲಿ ಸಂಚಾರ ವ್ಯತ್ಯಯ

7

ಕಾವೇರಿ ಪ್ರತಿಭಟನೆ: ತಮಿಳುನಾಡಿನಲ್ಲಿ ಸಂಚಾರ ವ್ಯತ್ಯಯ

Published:
Updated:

ಚೆನ್ನೈ: ಡಿಎಂಕೆ ಹಾಗೂ ಇತರೆ ವಿರೋಧ ಪಕ್ಷಗಳು ‘ಕಾವೇರಿ ನಿರ್ವಹಣಾ ಮಂಡಳಿ’ ರಚನೆಗೆ ಒತ್ತಾಯಿಸಿ ಬಂದ್‌ಗೆ ಕರೆ ನೀಡಿರುವುದರಿಂದಾಗಿ ತಮಿಳುನಾಡಿನಲ್ಲಿ ಬಸ್‌ ಹಾಗೂ ರೈಲು ಸಂಚಾರದಲ್ಲಿ ವ್ಯತ್ಯಯಗಳಾಗಿವೆ.

ತಮಿಳುನಾಡಿನಾದ್ಯಂತ ಸುಮಾರು 20ಕ್ಕೂ ಹೆಚ್ಚು ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರದಲ್ಲಿ 30–90 ನಿಮಿಷ ವಿಳಂಬವಾಗಿದೆ. ಚೆನ್ನೈನಲ್ಲಿ ನಗರ ಪಾಲಿಕೆಯ ಶೇ. 45ರಷ್ಟು ಬಸ್‌ಗ‌ಳ ಸಂಚಾರ ಸ್ಥಗಿತವಾಗಿದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯೂ ಬಂದ್‌ಗೆ ಬೆಂಬಲ ನೀಡಿರುವುದರಿಂದ ರಾಜ್ಯದಾದ್ಯಂತ ಸಂಚಾರ ಸಮಸ್ಯೆ ಉಂಟಾಗಿದೆ. ಓಲಾ, ಉಬೆರ್‌ನ ಸುಮಾರು 10 ಸಾವಿರಕ್ಕೂ ಹೆಚ್ಚು ಕಾರು ಚಾಲಕರು ಬಂದ್‌ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry