ಶನಿವಾರ, ಡಿಸೆಂಬರ್ 7, 2019
25 °C

ಆರ್‌ಬಿಐ ಹಣಕಾಸು ನೀತಿ: ರೆಪೊ ದರ ಯಥಾಸ್ಥಿತಿ

Published:
Updated:
ಆರ್‌ಬಿಐ ಹಣಕಾಸು ನೀತಿ: ರೆಪೊ ದರ ಯಥಾಸ್ಥಿತಿ

ನವದೆಹಲಿ: ಬ್ಯಾಂಕ್‌ಗಳಿಗೆ ಅಲ್ಪಾವಧಿಗೆ ನೀಡುವ ಸಾಲಕ್ಕೆ ವಿಧಿಸುವ ಬಡ್ಡಿ ದರವಾಗಿರುವ ರೆಪೊ ದರದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಯಾವುದೇ ಬದಲಾವಣೆ ಮಾಡಿಲ್ಲ.

ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) 2018–19ನೇ ಸಾಲಿನ ಮೊದಲ ದ್ವೈಮಾಸಿಕ ಹಣಕಾಸು ನೀತಿಯನ್ನು ಗುರುವಾರ ಪ್ರಕಟಿಸಿದೆ.

ಸತತ ನಾಲ್ಕನೇ ಬಾರಿಯೂ ರೆಪೊ ದರವನ್ನು ಶೇ 6 ಮತ್ತು ವ್ಯವಸ್ಥೆಯಲ್ಲಿನ ಹೆಚ್ಚುವರಿ ನಗದು ಪ್ರಮಾಣ ತಗ್ಗಿಸಲು ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ ನೀಡುವ ಬಡ್ಡಿ ದರ (ರಿವರ್ಸ್‌ ರೆಪೊ) ಶೇ 5.75 ಕಾಯ್ದುಕೊಳ್ಳಲಾಗಿದೆ.

2018–19ನೇ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಹಣದುಬ್ಬರ ಶೇ 4.7–5.1ರಷ್ಟು ಹಾಗೂ ದ್ವಿತಿಯಾರ್ಧದಲ್ಲಿ ಶೇ 4.4ರಷ್ಟು ಹಣದುಬ್ಬರ ಅಂದಾಜಿಸಿದೆ.

ಆರ್ಥಿಕ ವೃದ್ಧಿ ದರ(ಜಿಡಿಪಿ) 2018–19ರಲ್ಲಿ ಶೇ 6.6ರಿಂದ ಶೇ 7.4ಕ್ಕೆ ಏರಿಕೆಯಾಗಲಿದೆ ಎಂದು ಆರ್‌ಬಿಐ ಹೇಳಿದೆ.

ಪ್ರತಿಕ್ರಿಯಿಸಿ (+)