ಭಾನುವಾರ, ಡಿಸೆಂಬರ್ 15, 2019
25 °C

ಚಿರತೆ ದಾಳಿಗೆ ಕುರಿಗಳ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿರತೆ ದಾಳಿಗೆ ಕುರಿಗಳ ಸಾವು

 

ಬಂಗಾರಪೇಟೆ: ಯರಗೋಳು ಗ್ರಾಮದ ಬಳಿ ಮಂಗಳವಾರ ಮುಂಜಾನೆ ಚಿರತೆ ನಡೆಸಿದ ದಾಳಿಯಲ್ಲಿ ಇಪ್ಪತ್ತೆರಡು ಕುರಿಗಳು ಬಲಿಯಾಗಿದೆ. ಗ್ರಾಮದ ಮುನಿಯಪ್ಪ ಎಂಬುವರಿಗೆ ಸೇರಿದ ಕುರಿಗಳನ್ನು ಅವರ ಮನೆ ಬಳಿ ಇರಿಸಲಾಗಿದ್ದ ವೇಳೆ ಚಿರತೆ ದಾಳಿ ಮಾಡಿದೆ. ದಾಳಿಯಿಂದಾಗಿ ₹ 1 ಲಕ್ಷ ನಷ್ಟವುಂಟಾಗಿದೆ ಎಂದು ಮುನಿಯಪ್ಪ ಕುಟುಂಬದವರು ತಿಳಿಸಿದ್ದಾರೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದಿದ್ದಾರೆ.

ಪ್ರತಿಕ್ರಿಯಿಸಿ (+)