ಭಾನುವಾರ, ಡಿಸೆಂಬರ್ 15, 2019
25 °C

ವಿಠಲ್ ಭಟ್ಟರ ‘ಹ್ಯಾಂಗೋವರ್’!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಠಲ್ ಭಟ್ಟರ ‘ಹ್ಯಾಂಗೋವರ್’!

ನಿರ್ದೇಶಕ ವಿಠಲ್ ಭಟ್ ಅವರು ತಾವು ನಡೆಸುತ್ತಿರುವ ನಟನಾ ತರಬೇತಿ ಶಾಲೆ ‘ಫಿಲಂ ಫ್ಯಾಕ್ಟರಿ’ಯಲ್ಲಿ ಒಂದಿಷ್ಟು ಹುಡುಗ ಹುಡುಗಿಯರಿಗೆ ತರಬೇತಿ ನೀಡಿ ‘ಹ್ಯಾಂಗೋವರ್’ ಎನ್ನುವ ಸಿನಿಮಾ ಸಿದ್ಧಪಡಿಸಿದ್ದಾರೆ. ಈ ಸಿನಿಮಾ ನಿರ್ಮಾಣಕ್ಕೆ ರಾಕೇಶ್ ಡಿ. ಅವರು ಹಣ ಹೂಡಿಕೆ ಮಾಡಿದ್ದಾರೆ.

ಮೈಸೂರು, ಬೆಂಗಳೂರು ಮತ್ತು ಊಟಿಯಲ್ಲಿ ಚಿತ್ರೀಕರಣ ನಡೆದಿದೆ. ಸಂಗೀತ ನಿರ್ದೇಶನ ವೀರ್ ಸಮರ್ಥ್ ಅವರದ್ದು, ಛಾಯಾಗ್ರಹಣದ ಹೊಣೆ ಹೊತ್ತವರು ಯೋಗಿ.

‘ಹ್ಯಾಂಗೋವರ್’ ಚಿತ್ರವು ಮೂವರು ಯುವಕರ ಕಥೆ. ‘ಮೋಜು-ಮಸ್ತಿ ಮಾಡುತ್ತಾ ಸಂತೋಷದಿಂದ ಇರುವ ಇವರ ಜೀವನದಲ್ಲಿ ನಡೆಯುವ ಒಂದು ಘಟನೆ ಜೀವನ ಶೈಲಿಯನ್ನೇ ಬದಲಾಯಿಸುವಷ್ಟು ದೊಡ್ಡದಾದ ಸಮಸ್ಯೆಯಾಗಿ ಬಲಾಗುತ್ತದೆ. ಈ ಸಮಸ್ಯೆಯಿಂದ ಪಾರಾಗುವ ಪ್ರತಿ ಸನ್ನಿವೇಶವೂ ವಿಕ್ಷಕರಿಗೆ ವಿಶೇಷ ಅನುಭೂತಿ ನೀಡುತ್ತದೆ’ ಎಂದು ಚಿತ್ರತಂಡ ಹೇಳಿಕೊಂಡಿದೆ.

ಪ್ರತಿಕ್ರಿಯಿಸಿ (+)