ಕಳಪೆ ಕಾಮಗಾರಿ ಆರೋಪ

7

ಕಳಪೆ ಕಾಮಗಾರಿ ಆರೋಪ

Published:
Updated:

ಎಚ್.ಡಿ.ಕೋಟೆ: ಇಲ್ಲಿನ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ನಡೆಯುತ್ತಿರುವ ದುರಸ್ತಿ ಕಾಮಗಾರಿ ಕಳಪೆಯಿಂದ ಕೂಡಿದೆ. ಅಧಿಕಾರಿಗಳು ಮತ್ತು ಗುತ್ತಿಗೆ ದಾರರು ಶಾಮೀಲಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಕಚೇರಿ ಮುಂಭಾಗದ ದಕ್ಷಿಣ ದಿಕ್ಕಿನಲ್ಲಿ ಉತ್ತಮ ಸ್ಥಿತಿಯಲ್ಲಿರುವ ಕಾಂಪೌಂಡ್ ಮತ್ತು ಗೇಟ್ ಇದ್ದರೂ ಹಣ ಮಾಡುವ ಉದ್ದೇಶದಿಂದ ಈ ಕಾಮಗಾರಿ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.

ಈ ಕಾಮಗಾರಿ ನೋಡಿಕೊಳ್ಳುತ್ತಿ ರುವ ಕಿರಿಯ ಎಂಜಿನಿಯರ್ ಜಾಕಬ್, ಇದು ಕೇವಲ ₹ 2 ಲಕ್ಷದ ಕಾಮಗಾರಿ ಎಂದು ಹೇಳಿದರೆ, ಎಇಇ ಮಹೇಶ್ ಒಟ್ಟು ₹ 10 ಲಕ್ಷದ ಕಾಮಗಾರಿಯಲ್ಲಿ ₹ 5 ಲಕ್ಷದ ಕಾಮಗಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.‘ಎಂಜಿನಿಯರ್ ₹ 2 ಲಕ್ಷದ ಕಾಮಗಾರಿ ಎಂದರೆ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸಿದ್ದರಾಜು ₹ 3 ಲಕ್ಷದ ಕಾಮಗಾರಿ ಎಂದು ಹೇಳುತ್ತಾರೆ. ಎಇಇ ಅವರಿಗೆ ಕೇಳಿದರೆ ₹ 5 ಲಕ್ಷ ಎಂದು ಹೇಳುತ್ತಾರೆ. ಇದರಲ್ಲಿ ಯಾವುದು ಸತ್ಯ’ ಎಂದು ಸ್ಥಳೀಯ ಮಹೇಶ್ ಪ್ರಶ್ನಿಸಿದ್ದಾರೆ.‘ಎಲ್ಲಾ ಕೆಲಸವನ್ನೂ ನಾವು ನೋಡಲಾಗುವುದಿಲ್ಲ. ಮೇಲ್ನೋಟಕ್ಕೆ ಕಾಮಗಾರಿ ಉತ್ತಮವಾಗಿದೆ’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸಿದ್ದರಾಜು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry