ಭಾನುವಾರ, ಡಿಸೆಂಬರ್ 15, 2019
19 °C

ಅಂತರ್‌ ಜಾತಿ ವಿವಾಹ: ಕುಟುಂಬದವರಿಂದಲೇ ಮಹಿಳೆ ಹತ್ಯೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಅಂತರ್‌ ಜಾತಿ ವಿವಾಹ: ಕುಟುಂಬದವರಿಂದಲೇ ಮಹಿಳೆ ಹತ್ಯೆ

ಬರ್ವಾನಿ: ಮತ್ತೊಂದು ಜಾತಿಯ ಯುವಕನೊಂದಿಗೆ ವಿವಾಹವಾಗಿದ್ದ 24 ವರ್ಷದ ಮಹಿಳೆಯನ್ನು ಆಕೆಯ ಕುಟುಂಬದವರೇ ಕೊಲೆ ಮಾಡಿರುವ ಅಮಾನವೀಯ ಕೃತ್ಯ ಮಧ್ಯಪ್ರದೇಶದಲ್ಲಿ ವರದಿಯಾಗಿದೆ.

'ಬೇರೆ ಬೇರೆ ಜಾತಿಗೆ ಸೇರಿದ ಸರ್ಲಾ ಮಾಲಿ ಹಾಗೂ ಪಂಕಜ್‌ ಮಾಲಿ ಒಂದು ವರ್ಷದ ಹಿಂದೆಯೇ ವಿವಾಹವಾಗಿದ್ದರು. ಆಗಿನಿಂದಲೂ ಸರ್ಲಾ ಕುಟುಂಬದವರು ಆಕೆಯ ವಿರುದ್ಧ ಸಿಟ್ಟಾಗಿದ್ದರು' ಎಂದು ಖೇತಿಯಾ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ರಾಜೇಂದ್ರ ಇಂಗೆಲ್‌ ಹೇಳಿದ್ದಾರೆ.

‘ಸರ್ಲಾ ತಮ್ಮ ಪತಿಯೊಡನೆ ಖೇತಿಯಾ ಪಟ್ಟಣದ ಪಕ್ಕದ ಹಳ್ಳಿಯಲ್ಲಿ ವಾಸವಿದ್ದರು. ಬುಧವಾರ ಆಕೆಯ ಸಹೋದರ ತಾಯಿಯ ಅನಾರೋಗ್ಯದ ನೆಪಹೇಳಿ ಖೇತಿಯಲ್ಲಿರುವ ತಮ್ಮ ನಿವಾಸಕ್ಕೆ ಕರೆದುಕೊಂಡು ಬಂದಿದ್ದ. ಗುರುವಾರ ಬೆಳಿಗ್ಗೆ ಮನೆಯವರೆಲ್ಲ ಸೇರಿ ಆಕೆಯನ್ನು ಕೊಲೆ ಮಾಡಿದ್ದಾರೆ’ ಎಂದೂ ಅವರು ಹೇಳಿದ್ದಾರೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಸರ್ಲಾ ತಂದೆ ದೇವಿದಾಸ್‌ ಕೊಲಿ(55)ಯನ್ನು ಬಂಧಿಸಲಾಗಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 302ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ತಲೆಮರೆಸಿಕೊಂಡಿರುವ ತಾಯಿ ತುಳಸಿಬಾಯಿ(50) ಹಾಗೂ ಸಹೋದರ ಹಿರಾಲಾಲ್‌(25)ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಪ್ರತಿಕ್ರಿಯಿಸಿ (+)