ದಲಿತರಿಗೆ ಹ್ಯಾಂಡ್‌ಪಂಪ್ ಮುಟ್ಟದಂತೆ ಎಚ್ಚರಿಕೆ; ನೀರು ಎತ್ತಿ ಸುರಿದ ಸವರ್ಣೀಯರು

7

ದಲಿತರಿಗೆ ಹ್ಯಾಂಡ್‌ಪಂಪ್ ಮುಟ್ಟದಂತೆ ಎಚ್ಚರಿಕೆ; ನೀರು ಎತ್ತಿ ಸುರಿದ ಸವರ್ಣೀಯರು

Published:
Updated:
ದಲಿತರಿಗೆ ಹ್ಯಾಂಡ್‌ಪಂಪ್ ಮುಟ್ಟದಂತೆ ಎಚ್ಚರಿಕೆ; ನೀರು ಎತ್ತಿ ಸುರಿದ ಸವರ್ಣೀಯರು

ಯಾದಗಿರಿ: ಜಿಲ್ಲೆಯ ವಡಗೇರಾ ತಾಲ್ಲೂಕಿನ ಕೊಂಕಲ್‌ ಗ್ರಾಮದಲ್ಲಿ ಸರ್ವಣೀಯರು ದಲಿತರಿಗೆ ಕುಡಿಯುವ ನೀರು ಕೊಡದೇ ಅಸ್ಪೃಶ್ಯತೆ ಆಚರಿಸುವಂತೆ ಬೆದರಿಕೆ ಹಾಕಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮೂರು ದಿನಗಳ ಹಿಂದೆ ಗ್ರಾಮದ ದಲಿತರ ಕಾಲೊನಿಯಲ್ಲಿರುವ ಹ್ಯಾಂಡ್‌ಪಂಪ್ ಕೆಟ್ಟಿತ್ತು. ಆಗ ದಲಿತರು ಸವರ್ಣೀಯರ ಕಾಲೊನಿಯಲ್ಲಿನ ಹ್ಯಾಂಡ್‌ಪಂಪ್‌ನಲ್ಲಿ ಕುಡಿಯಲು ನೀರು ತರಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಹ್ಯಾಂಡ್‌ಪಂಪ್ ಮುಟ್ಟದಂತೆ ಎಚ್ಚರಿಕೆ ನೀಡಿದ್ದಾರೆ. ಕುಡಿಯಲು ನೀರು ಒದಗಿಸುವಂತೆ ಮನವಿ ಮಾಡಿಕೊಂಡ ಮೇಲೆ ತಾವೇ ಹ್ಯಾಂಡ್‌ಪಂಪ್‌ನಿಂದ ನೀರು ಹಿಡಿದು ದಲಿತ ಕೊಡಗಳಿಗೆ ಸುರಿದಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ನಂತರ ಗ್ರಾಮದ ಮುಖಂಡರ ಸಮ್ಮುಖದಲ್ಲಿ ರಾಜೀಸಂಧಾನದ ಮೂಲಕ ಪ್ರಕರಣ ಇತ್ಯರ್ಥಗೊಂಡಿದೆ. ಆದರೂ ರಾಜೀಸಂಧಾನ ಸಭೆ ಮುಗಿದ ಮೇಲೆ ಸವರ್ಣೀಯರು ಕೆಲವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ದಲಿತರು ಭೀತಿ ವ್ಯಕ್ತಪಡಿಸಿದ್ದಾರೆ. ಬೆದರಿಕೆಗೆ ಸಂಬಂಧಿಸಿದಂತೆ ದಲಿತರು ದೂರು ದಾಖಲಿಸಿಲ್ಲ ಎಂಬುದಾಗಿ ಗುರುವಾರ ಗ್ರಾಮಕ್ಕೆ ಭೇಟಿ ನೀಡಿದ ದಲಿತ ಸಂಘಟನೆಯ ರಾಜ್ಯ ಅಧ್ಯಕ್ಷ ಹನುಮಂತ ಯಳಸಂಗಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸರ್ಕಾರಕ್ಕೆ ವರದಿ: ಅಸ್ಪೃಶ್ಯತೆ ಆಚರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಜಿಲ್ಲಾಧಿಕಾರಿಗೆ ವರದಿ ನೀಡಲಾಗಿದೆ. ಅಸ್ಪೃಶ್ಯತೆ ಆಚರಿಸುವಂತಿಲ್ಲ ಎಂಬುದಾಗಿ ಸವರ್ಣೀಯರಿಗೆ ತಿಳಿವಳಿಕೆ ಮೂಡಿಸಲಾಗಿದೆ ಎಂದು ವಡಗೇರಾ ತಹಶೀಲ್ದಾರ್ ಪ್ರಕಾಶ್ ಹೊಸಮನಿ ತಿಳಿಸಿದರು.

ಪರಿಸ್ಥಿತಿ ಶಾಂತ: ಅಸ್ಪೃಶ್ಯತೆ ಆಚರಣೆ ಕಾನೂನು ಬಾಹಿರ ಎಂಬುದಾಗಿ ಸವರ್ಣೀಯರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅಲ್ಲದೇ ದಲಿತ ಕಾಲೊನಿಯ ಹ್ಯಾಂಡ್‌ಪಂಪ್ ದುರಸ್ತಿಗೊಳಿಸಿ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ. ಗ್ರಾಮದಲ್ಲಿ ಪರಿಸ್ಥಿತಿ ಶಾಂತವಾಗಿದೆ ಎಂದು ಪಿಎಸ್‌ಐ ಮಹಾದೇವ ದಿಡ್ಡಿಮನಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry