ಶುಕ್ರವಾರ, ಏಪ್ರಿಲ್ 06, 2018

7

ಶುಕ್ರವಾರ, ಏಪ್ರಿಲ್ 06, 2018

Published:
Updated:

ಬಿಳಿಯನ ಗುಂಡಿಗೆ ನೀಗ್ರೋ ಗಾಂಧಿ ಮಾರ‍್ಟಿನ್‌ ಲೂಥರ್‌ಕಿಂಗ್‌ ಬಲಿ: ವರ್ಣ ವೈಪರೀತ್ಯದ ಹುಚ್ಚಿಂದ ಶಾಂತಿ ಆರಾಧಕನ ಅಸ್ತಮಾನ

ಮೆಂಫಿಸ್‌ (ಟೆನೆಸೀ), ಏ. 5–
ನೀಗ್ರೋಗಳ ಪೌರ ಹಕ್ಕುಬಾಧ್ಯತೆ ಚಳವಳಿಯ ನಾಯಕ ಡಾ. ಮಾರ್ಟಿನ್‌ ಲೂಥರ್‌ಕಿಂಗ್‌ ಇಂದು ಮುಂಜಾನೆ ಹಂತಕನ ಗುಂಡಿಗೆ ಬಲಿಯಾದರು.

ಇಲ್ಲಿನ ಹೊಟೇಲೊಂದರಲ್ಲಿ ತಂಗಿದ್ದ ಡಾ. ಕಿಂಗ್‌, ಹಂತಕನ ಗುಂಡು ತಗಲಿದ ಬಳಿಕ ಆಸ್ಪತ್ರೆಯಲ್ಲಿ ಕಡೆಯುಸಿರೆಳೆದರು.

ತಲೆಗೆ ಗುಂಡಿನೇಟು ಬಿದ್ದಿದ್ದ 39 ವರ್ಷ ವಯಸ್ಸಿನ ಪೌರತ್ವ ಹಕ್ಕುಬಾಧ್ಯತೆ ನಾಯಕ ಲೂಥರ್‌ಕಿಂಗ್‌ ಅಸು ನೀಗಿದರೆಂದು ಪೋಲೀಸ್‌ ಕಮೀಷನರ್‌ ಫ್ರಾಂಕ್ ಹಾಲೋಮನ್‌ ವರದಿಗಾರರಿಗೆ ತಿಳಿಸಿದರು.

ಸೊಗಸಾದ ಬಿಳಿ ಧರಿಸಿದ್ದ ಬಿಳಿಯನೊಬ್ಬನ ಶೋಧಕ್ಕಾಗಿ ರಾಷ್ಟ್ರಾದ್ಯಂತ ಪೋಲೀಸರಿಗೆ ತಿಳಿಸಲಾಗಿದೆ. ಅದೇ ಉದ್ದೇಶಕ್ಕಾಗಿ ನ್ಯಾಷನಲ್‌ ಗಾರ್ಡ್‌ ವ್ಯವಸ್ಥೆಯನ್ನೂ ಬಸಳಲಾಗಿದೆ.

ತನಿಖೆಗೆ ಆಜ್ಞೆ: ಡಾ. ಮಾರ್ಟಿನ್‌ ಲೂಥರ್‌ಕಿಂಗ್‌ ಅವರನ್ನ ಗುಂಡಿಕ್ಕಿ ಕೊಂದ ಘಟನೆಯ ಅಮೂಲಾಗ್ರ ತನಿಖೆ ನಡೆಸಲು ಕೇಂದ್ರ ತನಿಖಾ ಸಂಸ್ಥೆ (ಎಫ್‌.ಬಿ.ಐ.)ಗೆ ಅಪ್ಪಣೆ ಮಾಡಲಾಗಿದೆಯೆಂದು ಅಮೆರಿಕದ ಅಟಾರ್ನಿ ಜನರಲ್‌ ರ‍್ಯಾಮ್‌ಸೆ ಇಂದು ವಾಷಿಂಗ್‌ಟನ್‌ನಲ್ಲಿ ಪ್ರಕಟಿಸಿದರು.

ಡಾ. ಕಿಂಗ್‌, ಹೊಟೇಲ್‌ ಎರಡನೇ ಮಹಡಿಯ ತಮ್ಮ ಕೋಣೆಯ ಹೊರಭಾಗದಲ್ಲಿ ನಿಂತಿದ್ದಾಗ ಹಂತಕ ಗುಂಡು ಹಾರಿಸಿದ. ಅವರನ್ನು ತಕ್ಷಣ ಇಲ್ಲಿನ ಸೆಂಟ್‌ ಜೋಸೆಫ್ಸ್‌ ಅಸ್ಪತ್ರೆಗೆ ಸಾಗಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry