ನ್ಯಾಯಾಂಗವನ್ನು ಗೌರವಿಸಿ

7

ನ್ಯಾಯಾಂಗವನ್ನು ಗೌರವಿಸಿ

Published:
Updated:

ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪು ಒಪ್ಪಿಗೆಯಾಗದೆ ಹೋದಲ್ಲಿ, ಅದರ ಮರುವಿಮರ್ಶೆಗೆ ಮೊರೆಹೋಗಿ ನ್ಯಾಯ ಪಡೆಯಲು ಅವಕಾಶ ಇದೆ. ಕೋರ್ಟ್‌, ಒಂದು ಸಮುದಾಯ ಅಥವಾ ಒಂದು ರಾಜ್ಯದ ಜವಾಬ್ದಾರಿ ಹೊತ್ತಿರುವುದಿಲ್ಲ. ಬಹುಮತದ ಅಭಿಪ್ರಾಯ ತಿಳಿದು ತೀರ್ಪು ನೀಡುವುದು ನ್ಯಾಯವಾಗಲಾರದು.

ತಮಿಳುನಾಡು ತನಗೆ ದೊರಕಬೇಕಾದ ನ್ಯಾಯಕ್ಕಾಗಿ ಬೇಡಿಕೆ ಇಡಲಿ. ಅದು ನ್ಯಾಯಸಮ್ಮತ. ಅದರ ಬದಲು ಬಂದ್ ಮುಂತಾದ ಒತ್ತಡಗಳಿಗೆ ಸುಪ್ರೀಂ ಕೋರ್ಟ್ ಮಣಿದು, ತೀರ್ಪು ಬದಲಾಯಿಸಬಹುದು ಎಂಬ ಗ್ರಹಿಕೆ ಅಪ್ರಬುದ್ಧ. ಸುಪ್ರೀಂ ಕೋರ್ಟ್‌ ತೀರ್ಪನ್ನು ಸಂಸತ್ತಿನಲ್ಲಿ ಮಾತ್ರ ಸಕಾರಣವಾಗಿ ಬದಲಿಸಲು ಸಾಧ್ಯ.

ಕಾವೇರಿ ನೀರಿನ ವಿಷಯವಾಗಿ ಮತ್ತು ದಲಿತರ ಮೇಲಿನ ದೌರ್ಜನ್ಯ ತಡೆ ಕಾನೂನಿಗೆ ಸಂಬಂಧಿಸಿದ ತೀರ್ಪುಗಳಲ್ಲಿ ‘ತಮಗೆ ನ್ಯಾಯ ದೊರಕಿಲ್ಲ’ ಎಂದು ಸಂಬಂಧ ಪಟ್ಟವರು ಅಸಮಾಧಾನ ವ್ಯಕ್ತಪಡಿಸುವುದು ಸರಿ. ಆದರೆ ಅದನ್ನೇ ರಾಜಕೀಯ ಅಸ್ತ್ರ ಮಾಡಿಕೊಳ್ಳಲು ಹೋದರೆ ಅದು ರಾಜಕೀಯ ಪಕ್ಷಗಳ ಭವಿಷ್ಯಕ್ಕೆ ದೊಡ್ಡ ಆಘಾತ ಆಗುವುದು ಖಂಡಿತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry