ಭಯೋತ್ಪಾದನೆ ಕಂಟಕ

7
ಅಲಿಪ್ತ ದೇಶಗಳ ಸಚಿವರ ಸಮಾವೇಶ

ಭಯೋತ್ಪಾದನೆ ಕಂಟಕ

Published:
Updated:
ಭಯೋತ್ಪಾದನೆ ಕಂಟಕ

ಬಾಕು (ಅಜರ್‌ಬೈಜಾನ್) : ‘ವಿಶ್ವಶಾಂತಿ ಮತ್ತು ಭದ್ರತೆಗೆ ಭಯೋತ್ಪಾದನೆ ಕಂಟಕ. ಇದು ನಮ್ಮ ನಾಗರಿಕರನ್ನು ಕೊಲ್ಲುವ ಜೊತೆಗೆ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಅಭಿಪ್ರಾಯಪಟ್ಟರು.

ಅಲಿಪ್ತ ದೇಶಗಳ ಸಚಿವರ 18ನೇ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಶಕ್ತಿಶಾಲಿ ಭದ್ರತಾ ಮಂಡಳಿಯ ಸುಧಾರಣೆಗಾಗಿ ಭಾರತ ಬಲವಾಗಿ ಪ್ರಯತ್ನಿಸುತ್ತಿದೆ’ ಎಂದರು.

‘ದುರದೃಷ್ಟವಶಾತ್‌, ಭಯೋತ್ಪಾದನೆಯನ್ನು ಎದುರಿಸುವ ಮಾತುಕತೆಗಳು ನಾವು ತೆಗೆದುಕೊಳ್ಳುತ್ತಿರುವ ಕ್ರಮಗಳೊಂದಿಗೆ ಹೊಂದಾಣಿಕೆಯಾಗುತ್ತಿಲ್ಲ. ಅಸ್ತಿತ್ವದಲ್ಲಿರುವ ಅಂತರರಾಷ್ಟ್ರೀಯ ಕಾನೂನುಗಳು ಮತ್ತು ಭಯೋತ್ಪಾದನೆಯಂತಹ ಸಮಸ್ಯೆಗಳನ್ನು ನಿವಾರಿಸುವ ಕಾರ್ಯವಿಧಾನಗಳನ್ನು ಬಲಪಡಿಸದ ಹೊರತು ಅದರ ಸವಾಲುಗಳನ್ನು ಎದುರಿಸುವುದು ಕಠಿಣವಾಗಲಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry