ಕಾಶ್ಮೀರ ಸಮಸ್ಯೆ: ಪಾಕ್‌ ಚರ್ಚೆ

7

ಕಾಶ್ಮೀರ ಸಮಸ್ಯೆ: ಪಾಕ್‌ ಚರ್ಚೆ

Published:
Updated:

ಇಸ್ಲಾಮಾಬಾದ್‌ : ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿರುವ ಬಗ್ಗೆ ದ್ವಿಪಕ್ಷೀಯ ಮಟ್ಟದಲ್ಲಿ ಮತ್ತು ಬಹುರಾಷ್ಟ್ರಗಳ ಸಮ್ಮುಖದಲ್ಲಿ ಪ್ರಸ್ತಾಪಿಸುವುದಾಗಿ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿ ತಿಳಿಸಿದೆ.

ಕಾಶ್ಮೀರದಲ್ಲಿನ ಹಿಂಸಾಚಾರ ಕುರಿತು ಪ್ರಧಾನಿ ಶಾಹಿದ್‌ ಖಕಾನ್‌ ಅಬ್ಬಾಸಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ರಾಷ್ಟ್ರೀಯ ಭದ್ರತಾ ಸಮಿತಿ ಸಭೆಯಲ್ಲಿ ಚರ್ಚಿಸಲಾಯಿತು.

ಕಣಿವೆಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರ ಮತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದವರ ಮೇಲೆ ಪೆಲೆಟ್‌ಗನ್‌ ಪ್ರಯೋಗಿಸಿರುವುದನ್ನು ಸಮಿತಿ ಖಂಡಿಸಿತು.

‘ಕಾಶ್ಮೀರದ ಜನರಿಗೆ ರಾಜಕೀಯ, ರಾಜತಾಂತ್ರಿಕ ಮತ್ತು ನೈತಿಕ ಬೆಂಬಲ ನೀಡಲು ಪಾಕಿಸ್ತಾನ ಬದ್ಧವಾಗಿದೆ’ ಎಂದು ಸಮಿತಿ ಪುನರುಚ್ಚರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry