ದ್ವೇಷ ಬಿತ್ತುತ್ತಿರುವ ರಾಹುಲ್‌: ಶಾ ಟೀಕೆ

7

ದ್ವೇಷ ಬಿತ್ತುತ್ತಿರುವ ರಾಹುಲ್‌: ಶಾ ಟೀಕೆ

Published:
Updated:

ನವದೆಹಲಿ: ಎಸ್‌ಸಿ ಎಸ್‌ಟಿ ಕಾಯ್ದೆ ಹಿಂಪಡೆಯಲಾಗಿದೆ ಎಂದು ಸುಳ್ಳು ಹೇಳಿ ಸಮಾಜದಲ್ಲಿ ದ್ವೇಷ ಹುಟ್ಟಿಸುವ ಕೆಲಸವನ್ನು ರಾಹುಲ್‌ ಗಾಂಧಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಆರೋಪಿಸಿದ್ದಾರೆ.

ಒಡಿಶಾ ಪ್ರವಾಸದಲ್ಲಿರುವ ಶಾ, ತಮ್ಮ ಟ್ವಿಟರ್‌ನಲ್ಲಿ ರಾಹುಲ್‌ ಗಾಂಧಿ ಅವರ ಭಾಷಣದ ವಿಡಿಯೊ ಟ್ಯಾಗ್‌ ಮಾಡಿದ್ದಾರೆ. ‘ದಲಿತರು ಮತ್ತು ಆದಿವಾಸಿಗಳ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ಎಸ್‌ಸಿ ಎಸ್‌ಟಿ ಕಾಯ್ದೆ ಹಿಂಪಡೆಯಲಾಗುತ್ತದೆ. ಪ್ರಧಾನಿ ಮೋದಿ ಈ ಬಗ್ಗೆ ಒಂದು ಮಾತೂ ಆಡುತ್ತಿಲ್ಲ’ ಎಂದು ಹೇಳಿರುವುದು ವಿಡಿಯೊದಲ್ಲಿದೆ.

‘ಸುಳ್ಳು ಮತ್ತು ಬರೇ ಸುಳ್ಳು !ಕಾಯ್ದೆ ಹಿಂಪಡೆಯಲಾಗುತ್ತದೆ ಎಂದು ಹೇಗೆ ಕತೆ ಹೆಣೆಯುತ್ತಿದ್ದಾರೆ ನೋಡಿ’ ಎಂದು ಶಾ ತಿರುಗೇಟು ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry