ಟೇಬಲ್‌ ಟೆನಿಸ್‌: ಪುರುಷರ ಜಯಭೇರಿ

7

ಟೇಬಲ್‌ ಟೆನಿಸ್‌: ಪುರುಷರ ಜಯಭೇರಿ

Published:
Updated:

ಗೋಲ್ಡ್ ಕೋಸ್ಟ್‌: ಟೇಬಲ್‌ ಟೆನಿಸ್‌ನ ತಂಡ ವಿಭಾಗದಲ್ಲಿ ಭಾರತದ ಪುರುಷರು ಮೊದಲ ದಿನ ಪಾರಮ್ಯ ಮೆರೆದರು. ದಿನದ ಮೊದಲ ಹಣಾಹಣಿಯಲ್ಲಿ ಐರ್ಲೆಂಡ್ ತಂಡವನ್ನು 3–0ಯಿಂದ ಸೋಲಿಸಿದ ಭಾರತ ನಂತರ ಟ್ರಿನಿಡಾಡ್ ಮತ್ತು ಟೊಬ್ಯಾಗೊ ಎದುರು 3–1ರಿಂದ ಗೆದ್ದಿತು.

ಐರ್ಲೆಂಡ್ ವಿರುದ್ಧದ ಹಣಾಹಣಿಯ ಮೊದಲ ಪಂದ್ಯದಲ್ಲಿ ಜ್ಞಾನಶೇಖರನ್‌ ಸತ್ಯನ್‌ ಉತ್ತಮ ಆರಂಭ ಒದಗಿಸಿದರು. ಆ್ಯಶ್ಲೆ ರಾಬಿನ್ಸನ್‌ ವಿರುದ್ಧ ಅವರು 11–4, 11–6, 11–4ರಿಂದ ಗೆದ್ದರು. ನಂತರ ಅಚಂತಾ ಶರತ್ ಕಮಲ್‌ 11–6, 11–8, 11–4ರಿಂದ ಪಾಲ್‌ ಮೆಕ್‌ರೀರಿ ಎದುರು ಗೆದ್ದರು.

ಸತ್ಯನ್‌ ಮತ್ತು ಹರಮೀತ್ ದೇಸಾಯಿ ಜೋಡಿ ಜಾಕ್‌ ವಿಲ್ಸನ್‌ ಮತ್ತು ಮೆಕ್‌ರೀರಿ ವಿರುದ್ಧ 11–2, 9–11, 11–5, 11–7ರಿಂದ ಗೆದ್ದರು.

ಟ್ರಿನಿಡಾಡ್ ಮತ್ತು ಟೊಬ್ಯಾಗೊ ಎದುರಿನ ಹಣಾಹಣಿಯಲ್ಲಿ ಆ್ಯಂಟನಿ ಅಮಲ್‌ರಾಜ್‌ ಮೊದಲ ಸಿಂಗಲ್ಸ್‌ನಲ್ಲಿ ಡೆಕ್ಸ್ಟರ್‌ ಲೂಯಿಸ್ ವಿರುದ್ಧ 11–5, 3–11, 11–2, 14–12ರಿಂದ ಗೆದ್ದರು. ಎರಡನೇ ಸಿಂಗಲ್ಸ್‌ನಲ್ಲಿ ಸತ್ಯನ್‌ 11–5, 11–5, 11–4ರಿಂದ ಆ್ಯರನ್ ವಿಲ್ಸನ್‌ ಎದುರು ಗೆದ್ದು ಮುನ್ನಡೆ ಹೆಚ್ಚಿಸಿದರು. ಸತ್ಯನ್‌ ಮತ್ತು ದೇಸಾಯಿ ಜೋಡಿ ವಿಲ್ಸನ್‌ ಮತ್ತು ಯುವರಾಜ್ ದೊಕ್ರಮ್‌ ಎದುರು 11–9, 11–4, 11–4ರಿಂದ ಭಾರತಕ್ಕೆ ಗೆಲುವಿನ ಉಡುಗೊರೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry