ವೇಲ್ಸ್‌ಗೆ ಮಣಿದ ಭಾರತ

7

ವೇಲ್ಸ್‌ಗೆ ಮಣಿದ ಭಾರತ

Published:
Updated:

ಗೋಲ್ಡ್‌ ಕೋಸ್ಟ್‌: ಭಾರತ ಮಹಿಳಾ ಹಾಕಿ ತಂಡದವರು ಮೊದಲ ಪಂದ್ಯದಲ್ಲೇ ಆಘಾತ ಅನುಭವಿಸಿದರು. ಗುರುವಾರ ನಡೆದ ‘ಎ’ ಗುಂಪಿನ ಹಣಾಹಣಿಯಲ್ಲಿ ರಾಣಿ ರಾಂಪಾಲ್ ಬಳಗದವರು ವೇಲ್ಸ್ ತಂಡದ ವಿರುದ್ಧ 2–3ರಿಂದ ಸೋತರು.

ಮೊದಲ ಅರ್ಧ ತಾಸಿನಲ್ಲಿ ಎರಡು ಗೋಲುಗಳಿಂದ ಹಿಂದುಳಿದಿದ್ದ ಭಾರತ ತಂಡ ನಂತರ ಎರಡು ಗೋಲುಗಳನ್ನು ಗಳಿಸಿ ಸಮಬಲ ಸಾಧಿಸಿತು. ಆದರೆ ಕೊನೆಯ ಹಂತದಲ್ಲಿ ಗೋಲು ಬಿಟ್ಟುಕೊಟ್ಟು ಸೋಲಿಗೆ ಶರಣಾಯಿತು.

ಭಾರತದ ಪರ ರಾಣಿ ರಾಂಪಾಲ್‌ (34ನೇ ನಿಮಿಷ) ಮತ್ತು ನಿಕ್ಕಿ ಪ್ರಧಾನ್‌ (41ನೇ ನಿ) ಗೋಲು ಗಳಿಸಿದರೆ ವೇಲ್ಸ್‌ಗೆ ಲಿಸಾ ಡ್ಯಾಲಿ (7ನೇ ನಿ), ಸಯಾನ್ ಫ್ರೆಂಚ್‌ (26ನೇ ನಿ) ಮತ್ತು ನತಾಶ ಮಾರ್ಕ್‌ ಜೋನ್ಸ್‌ (57ನೇ ನಿ) ಗೋಲು ಗಳಿಸಿಕೊಟ್ಚರು.

ಒಟ್ಟು 14 ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಕೈ ಚೆಲ್ಲಿದ್ದು ಭಾರತ ತಂಡಕ್ಕೆ ಮಾರಕವಾಯಿತು. ಗುಂಪು ಹಂತದ ಎರಡನೇ ಪಂದ್ಯದಲ್ಲಿ ಭಾರತ ಶುಕ್ರವಾರ ಮಲೇಷ್ಯಾವನ್ನು ಎದುರಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry