ಶುಕ್ರವಾರ, ಡಿಸೆಂಬರ್ 13, 2019
19 °C

‘ಕೋಟಿ ನಗು’ ಲೋಗೊ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕೋಟಿ ನಗು’ ಲೋಗೊ ಬಿಡುಗಡೆ

ಬೆಂಗಳೂರು: ‘ಕಾಯಿಲೆ ದೂರ ಮಾಡಿ ಮೊಗದಲ್ಲಿ ನಗು ಅರಳಿಸೋಣ’ ಎನ್ನುವ ಧ್ಯೇಯ ವಾಕ್ಯದೊಂದಿಗೆ ಹೋಮಿಯೊ ಕೇರ್‌ ಇಂಟರ್‌ನ್ಯಾಷನಲ್‌ ಸಂಸ್ಥೆ ‘ಒನ್‌ ಕ್ರೋರ್‌ ಎಂಡ್‌ ಸ್ಟಿಲ್‌ ಕೌಂಟಿಂಗ್‌’ ಲೊಗೊವನ್ನು ಬುಧವಾರ ಬಿಡುಗಡೆ ಮಾಡಿತು.

ಜಯನಗರ 5ನೇ ಬ್ಲಾಕ್‌ನಲ್ಲಿರುವ ಸಂಸ್ಥೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್‌ ಮೊರ್ಲವಾರ್‌ ಲೊಗೊ ಅನಾವರಣಗೊಳಿಸಿದರು.

‘ದೇಶದಾದ್ಯಂತ ಸಂಸ್ಥೆಯ 45 ಶಾಖೆಗಳು ಇವೆ. ಈ ಸಂಸ್ಥೆಯು ಇದುವರೆಗೂ ಮಧುಮೇಹ, ಸಂಧಿವಾತ, ಥೈರಾಯ್ಡ್‌, ಬಂಜೆತನ, ಹಾರ್ಮೋನ್‌ ಸಮಸ್ಯೆಯಿಂದ ಬಳಲುತ್ತಿದ್ದ ಒಂದು ಕೋಟಿಗೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ’ ಎಂದು ಶ್ರೀಕಾಂತ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)