‘ಪ್ರಸವ ಪೂರ್ವ ಪರೀಕ್ಷೆ ಅಧ್ಯಯನ’

7

‘ಪ್ರಸವ ಪೂರ್ವ ಪರೀಕ್ಷೆ ಅಧ್ಯಯನ’

Published:
Updated:

ಬೆಂಗಳೂರು: ಮೆಡ್‌ಜೋನಮ್ ಸಂಸ್ಥೆ ‘ನಾನ್‌ –ಇನ್ವೆನ್ಸಿವ್‌ ಪ್ರೆನಟಲ್‌ ಟೆಸ್ಟಿಂಗ್‌’ ಪ್ರಸವ ಪೂರ್ವ ಪರೀಕ್ಷೆಯ ಕುರಿತು ಅಧ್ಯಯನ ನಡೆಸಿದೆ.

ಬೆಂಗಳೂರಿನಲ್ಲಿ ಸ್ಥಾಪನೆಗೊಂಡಿರುವ ಮೆಡ್‌ಜೋನಮ್‌ ಸಂಸ್ಥೆಯ ಪ್ರಯೋಗಾಲಯದಲ್ಲಿ ಅಧ್ಯಯನ ನಡೆದಿದೆ. ಒಟ್ಟು 516 ಗರ್ಭಿಣಿಯರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ ಶೇ 98ರಷ್ಟು ಪ್ರಕರಣಗಳು ಅತ್ಯಂತ ಕಡಿಮೆ ರಿಸ್ಕ್‌ನಿಂದ ಕೂಡಿವೆ ಹಾಗೂ ಶೇ 2ರಷ್ಟು ಗರ್ಭಿಣಿಯರು ಮಾತ್ರ ತೀವ್ರ ಸ್ವರೂಪದ ಅಪಾಯ ಎದುರಿಸುತ್ತಿದ್ದಾರೆ ಎಂದು ಮೆಡ್‌ಜೋನಮ್ ಸಂಸ್ಥೆ ಮಾಹಿತಿ ನೀಡಿದೆ.

ಸಾಂಪ್ರದಾಯಿಕ ಪರೀಕ್ಷೆಗಳಿಗೆ ಹೋಲಿಸಿದರೆ ಇದರಿಂದ ಪ್ರಸವಕ್ಕಿಂತ ಮೊದಲೇ ಮಕ್ಕಳ ಆರೋಗ್ಯ ಹಾಗೂ ಗರ್ಭಿಣಿಯರ ಆರೋಗ್ಯ ಸ್ಥಿತಿಯನ್ನು ಸುಲಭವಾಗಿ ತಿಳಿದುಕೊಳ್ಳಬಹುದು ಎಂಬ ಅಂಶವನ್ನು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

‘ಗರ್ಭಾವಸ್ಥೆಯ ಯಾವುದೇ ತಿಂಗಳಿನಲ್ಲಿ ಬೇಕಾದರೂ ಈ ಪರೀಕ್ಷೆಯನ್ನು ಮಾಡಿಸಿಕೊಳ್ಳಬಹುದು. ‌ಇದರಿಂದ ಮಗುವಿನ ಬೆಳವಣಿಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ. ಇದು ಸುರಕ್ಷಿತ ಪರೀಕ್ಷಾ ಮಾರ್ಗವಾಗಿದೆ’ ಎಂದು ಮೆಡ್‌ಜೋನಮ್‌ ಅಧ್ಯಯನ ತಂಡದ ನಿರ್ದೇಶಕಿ ಡಾ. ಪ್ರಿಯಾ ಕದಮ್ ಹೇಳಿದ್ದಾರೆ.

‘ಈ ಪರೀಕ್ಷೆಯ ಕುರಿತು ಜಾಗೃತಿ ಹೆಚ್ಚಾದರೆ ದೇಶದಲ್ಲಿ ಆನುವಂಶಿಕ ಅಸ್ವಸ್ಥತೆಯ ಪ್ರಮಾಣ ಕೂಡ ಕಡಿಮೆಯಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ಮಣಿಪಾಲ ಆಸ್ಪತ್ರೆ, ನವದೆಹಲಿಯ ಗಂಗಾರಾಮ್‌, ಹೈದರಾಬಾದ್‌ನ ರೈನ್‌ಬೋ, ಕೊಚ್ಚಿಯ ಅಮೃತಾ ಇನ್ಸ್‌ಟ್ಯೂಟ್ ಆಫ್‌ ಮೆಡಿಕಲ್ ಸೈನ್ಸ್‌ ಅಂಡ್‌ ರಿಸರ್ಚ್‌ ಸೆಂಟರ್‌, ಚೆನ್ನೈನ ರಾಮಚಂದ್ರ ಮೆಡಿಕಲ್ ಕಾಲೇಜು, ನವದೆಹಲಿಯ ಆಲ್ ಇಂಡಿಯಾ ಇನ್ಸ್‌ಟ್ಯೂಟ್ ಆಫ್‌ ಮೆಡಿಕಲ್‌ ಸೈನ್ಸ್, ಕೊಚ್ಚಿಯ ಸಿಐಎಂಎಆರ್‌ ಫರ್ಟಿಲಿಟಿ ಸೆಂಟರ್‌, ನವದೆಹಲಿಯ ಇಂದ್ರಪ್ರಸ್ಥ ಅಪೋಲೊ ಹಾಸ್ಟಿಟಲ್‌ಗಳು ಈ ಅಧ್ಯಯನದಲ್ಲಿ ಭಾಗವಹಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry