ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿನ ಕಳಪೆ ಸಾಧನೆ ಮುಖ್ಯವಲ್ಲ: ಪಾಂಟಿಂಗ್‌

ನಮ್ಮ ತಂಡ ಅತ್ಯುತ್ತಮ ಆಟವಾಡಲಿದೆ: ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ಮುಖ್ಯ ಕೋಚ್‌ ವಿಶ್ವಾಸ
Last Updated 5 ಏಪ್ರಿಲ್ 2018, 19:41 IST
ಅಕ್ಷರ ಗಾತ್ರ

ನವದೆಹಲಿ : ಡೆಲ್ಲಿ ಡೇರ್‌ಡೆವಿಲ್ಸ್‌ ತಂಡವು ಕಳೆದ ಹತ್ತು ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಆವೃತ್ತಿಗಳಲ್ಲಿ ಮಾಡಿದ ಕಳಪೆ ಸಾಧನೆಯು ತಮಗೆ ಮುಖ್ಯವಲ್ಲ ಎಂದು ಆ ತಂಡದ ಮುಖ್ಯ ಕೊಚ್‌ ರಿಕಿ ಪಾಂಟಿಂಗ್‌ ಹೇಳಿದ್ದಾರೆ.

ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ಮುಖ್ಯ ಕೋಚ್‌ ನೇಮಕವಾದ ನಂತರ ಗುರುವಾರ ಮೊದಲ ಬಾರಿಗೆ ಸುದ್ದಿಗೋಷ್ಠಿ ಅವರು ಮಾತನಾಡಿದರು.  

‘ಹೊಸ ತಂಡವು ಹೊಸ ಹುರುಪಿನಿಂದ ಕ್ರಿಕೆಟ್‌ ಆಡಲಿದೆ. ಮೊದಲ ಸಲ ಐಪಿಎಲ್‌ ಕಪ್‌ ಗೆಲ್ಲುವ ಸಾಮರ್ಥ್ಯ ಹೊಂದಿರುವ ಆಟಗಾರರು ನಮ್ಮಲ್ಲಿದ್ದಾರೆ. ಅವರೆಲ್ಲ ಉತ್ತಮವಾಗಿ ಆಡುವ ವಿಶ್ವಾಸವಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಈ ಕುರಿತು ತಂಡದ ಆಡಳಿತ ಮಂಡಳಿಯೊಂದಿಗೆ ಮಾತನಾಡಿದ್ದೇನೆ. ಯುವ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ. ಕ್ರೀಡಾಂಗಣದಲ್ಲಿ ಎಲ್ಲ ರೀತಿಯಿಂದಲೂ ಉತ್ತಮ ಆಟವಾಡಿದರೆ, ಸೋಲುವ ಪ್ರಶ್ನೆಯೇ ಇಲ್ಲ’ ಎಂದು ಭರವಸೆ ವ್ಯಕ್ತಪಡಿಸಿದರು. 

‘ಆಕ್ರಮಣಕಾರಿ ಮನೋಭಾವದಿಂದ ನಡೆದುಕೊಳ್ಳುವ ಬದಲು, ಯುವಕರಿಗೆ ಹೆಚ್ಚು ಕೌಶಲ್ಯಭರಿತರಾಗುವ ರೀತಿ ತರಬೇತಿ ನೀಡುತ್ತಿದ್ದೇನೆ. ನಾನು ಕೋಚ್‌ ಆಗಿ ಆಯ್ಕೆಯಾದ ಮೇಲೆ, ತಂಡವು ಆಕ್ರಮಣಕಾರಿ ಆಟವಾಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಈ ಬಗ್ಗೆ ತಂಡದೊಂದಿಗೆ ಚರ್ಚಿಸಿಲ್ಲ. ಬದಲಿಗೆ, ಎಲ್ಲ ಸವಾಲುಗಳನ್ನು ಎದುರಿಸಿ ಗೆಲುವಿನ ದಡ ಸೇರುವ ಕುರಿತು ಮಾತನಾಡಿದ್ದೇವೆ’ ಎಂದು ತಿಳಿಸಿದರು.

ಪಾಂಟಿಂಗ್‌ ಜತೆ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ತಂಡದ ನಾಯಕ ಗೌತಮ್‌ ಗಂಭೀರ್‌ ಅವರು, ‘ಶನಿವಾರ ಆರಂಭವಾಗುವ 11ನೇ ಆವೃತ್ತಿಯ ಐಪಿಎಲ್‌ ಬಗ್ಗೆ ಉತ್ಸುಕನಾಗಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT