ಲಾರಿ ಮುಷ್ಕರ ಮುಂದೂಡಿಕೆ

7

ಲಾರಿ ಮುಷ್ಕರ ಮುಂದೂಡಿಕೆ

Published:
Updated:

ಬೆಂಗಳೂರು: ವಾಹನಗಳ ವಿಮೆ ಕಂತಿನ ದರ ಏರಿಕೆ ಖಂಡಿಸಿ ‘ಅಖಿಲ ಭಾರತೀಯ ಸರಕು ಸಾಗಣೆ ವಾಹನಗಳ ಮಾಲೀಕರ ಒಕ್ಕೂಟ’ವು ರಾಷ್ಟ್ರದಾದ್ಯಂತ ಏಪ್ರಿಲ್ 7ರಿಂದ ಕರೆ ನೀಡಿದ್ದ ಮುಷ್ಕರವನ್ನು ಮುಂದೂಡಲಾಗಿದೆ.

‘ವಿಮೆ ಕಂತಿನ ದರ ಏರಿಕೆ ಜತೆಗೆ ತೈಲ ಬೆಲೆ ಏರಿಕೆಯನ್ನೂ ಖಂಡಿಸಿ ಮುಷ್ಕರ ನಡೆಸಲು ಚಿಂತನೆ ನಡೆಸಿದ್ದೇವೆ. ಹೀಗಾಗಿ, ಏ. 7ರಿಂದ ನಡೆಸಬೇಕಿದ್ದ ಮುಷ್ಕರವನ್ನು ಸದ್ಯಕ್ಕೆ ಹಿಂಪಡೆದಿದ್ದೇವೆ’ ಎಂದು ಒಕ್ಕೂಟದ ಅಧ್ಯಕ್ಷ ಬಿ.ಚನ್ನಾರೆಡ್ಡಿ ತಿಳಿಸಿದರು.

‘ದಕ್ಷಿಣ ಹಾಗೂ ಉತ್ತರ ಭಾರತದ ಸರಕು ಸಾಗಣೆ ವಾಹನಗಳ ಮಾಲೀಕರ ಸಭೆ ಕರೆದಿದ್ದೇವೆ. ಅಲ್ಲಿ ತೀರ್ಮಾನ ಕೈಗೊಂಡು, ಮುಷ್ಕರದ ಮುಂದಿನ ದಿನಾಂಕವನ್ನು ಪ್ರಕಟಿಸಲಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry