₹2 ಕೋಟಿ ಪಿಎಫ್‌ ದುರುಪಯೋಗ; ಎಫ್‌ಐಆರ್‌

6

₹2 ಕೋಟಿ ಪಿಎಫ್‌ ದುರುಪಯೋಗ; ಎಫ್‌ಐಆರ್‌

Published:
Updated:

ಬೆಂಗಳೂರು: ನಗರದ ‘ಸ್ಕಾಟ್‌’ ಗಾರ್ಮೆಂಟ್ಸ್‌ ಕಾರ್ಖಾನೆಯ ಕಾರ್ಮಿಕರ ವೇತನದಲ್ಲಿ ಕಡಿತಗೊಳಿಸಿದ್ದ ಭವಿಷ್ಯ ನಿಧಿ (ಪಿಎಫ್‌) ಹಣವನ್ನು ದುರುಪಯೋಗ

ಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಆರ್‌ಎಂವಿ ಬಡಾವಣೆ ನಿವಾಸಿ ನಾಸೀರ್‌ ಅಹ್ಮದ್‌ ಎಂಬುವರು ₹2.03 ಕೋಟಿ ಹಣ ದುರುಪಯೋಗಪಡಿಸಿಕೊಂಡಿರುವುದಾಗಿ ಇಪಿಎಫ್‌ಒ ಅಧಿಕಾರಿ ಎಂ.ಜಯಶಂಕರ್‌ ದೂರು ನೀಡಿದ್ದರು. ಅದರನ್ವಯ ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ’ ಎಂದು ಪೀಣ್ಯ ಪೊಲೀಸರು ತಿಳಿಸಿದರು.

‘100ಕ್ಕೂ ಹೆಚ್ಚು ಕಾರ್ಮಿಕರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಹೆಸರಿನಲ್ಲಿ ಪಿಎಫ್‌ ಹಣ ಸಹ ಕಡಿತ ಮಾಡಲಾಗಿತ್ತು. ಆದರೆ, ಅದನ್ನು ಪಿಎಫ್‌ ಕಚೇರಿಗೆ ಪಾವತಿಸಿರಲಿಲ್ಲ. ಈ ಬಗ್ಗೆ ಕಾರ್ಮಿಕರೊಬ್ಬರು ನೀಡಿದ್ದ ದೂರಿನನ್ವಯ ತನಿಖೆ ನಡೆಸಲಾಯಿತು. ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ನಾಸೀರ್‌ ಅಕ್ರಮ ಎಸಗಿದ್ದು ಗೊತ್ತಾಯಿತು’ ಎಂದು ಜಯಶಂಕರ್‌ ದೂರಿನಲ್ಲಿ ಹೇಳಿರುವುದಾಗಿ ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry