ಶುಕ್ರವಾರ, ಡಿಸೆಂಬರ್ 6, 2019
23 °C

ಮಹಿಳಾ ಶೌಚಾಲಯ ಬಳಸಿದ ಪೊಲೀಸ್‌ ಅಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಿಳಾ ಶೌಚಾಲಯ ಬಳಸಿದ ಪೊಲೀಸ್‌ ಅಧಿಕಾರಿ

ಮೈಸೂರು: ಇಲ್ಲಿನ ಗ್ರಾಮಾಂತರ ಬಸ್‌ ನಿಲ್ದಾಣದಲ್ಲಿ ಮಹಿಳೆಯರ ಶೌಚಾಲಯದಿಂದ ಸಂಚಾರ ಪೊಲೀಸ್‌ ಅಧಿಕಾರಿಯೊಬ್ಬರು ಹೊರ ಬರುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪುರುಷ ಪೊಲೀಸ್‌ ಅಧಿಕಾರಿ ಯಾರು ಎಂಬುದು ಗೊತ್ತಾಗಿಲ್ಲ. ಈ ವರ್ತನೆಯನ್ನು ಪ್ರಶ್ನಿಸಿದ ಶೌಚಾಲಯ ನಿರ್ವಹಣೆಯ ಹೊಣೆಹೊತ್ತ ಮಹಿಳೆಗೆ ಅವರು ಉಡಾಫೆಯ ಉತ್ತರ ನೀಡಿದ್ದಾರೆ.

ಗ್ರಾಮಾಂತರ ಬಸ್‌ ನಿಲ್ದಾಣದ ಉಪಪೊಲೀಸ್‌ ಠಾಣೆಯ ಪಕ್ಕದಲ್ಲಿ ಮಹಿಳಾ ಶೌಚಾಲಯವಿದೆ. ಕೆಲ ದಿನಗಳ ಹಿಂದೆ ತಡರಾತ್ರಿ ಕರ್ತವ್ಯನಿರತ ಸಂಚಾರ ಪೊಲೀಸ್‌ ಅಧಿಕಾರಿ ಈ ಶೌಚಾಲಯಕ್ಕೆ ಧಾವಿಸಿದ್ದಾರೆ. ಏಕಾಏಕಿ ಒಳನುಗ್ಗಿ ಮೂತ್ರ ವಿಸರ್ಜನೆ ಮಾಡಿದ್ದಾರೆ.

ಪುರುಷರೊಬ್ಬರು ಶೌಚಾಲಯ ಪ್ರವೇಶಿಸಿದ್ದನ್ನು ಗಮನಿಸಿದ ಕೆಲ ಮಹಿಳೆಯರು ಹೊರಗೆ ನಿಂತಿದ್ದಾರೆ. ಸಮವಸ್ತ್ರದಲ್ಲಿ ಹೊರಗೆ ಬರುವ ಅಧಿಕಾರಿಯನ್ನು ಶೌಚಾಲಯ ನಿರ್ವಹಣೆಯ ಹೊಣೆ ಹೊತ್ತ ಮಹಿಳೆ, ‘ಯಾರು ನಿಮಗೆ ಒಳಹೋಗಲು ಹೇಳಿದ್ದು’ ಎಂದು ಪ್ರಶ್ನಿಸಿದ್ದಾರೆ. ಸಾರ್ವಜನಿಕರೊಬ್ಬರು ಈ ದೃಶ್ಯವನ್ನು ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

‘ಈವರೆಗೂ ಇದು ಗಮನಕ್ಕೆ ಬಂದಿಲ್ಲ. ವಿಡಿಯೊ ಪರಿಶೀಲಿಸುತ್ತೇನೆ’ ಎಂದು ಪೊಲೀಸ್‌ ಕಮಿಷನರ್‌ ಡಾ.ಎ.ಸುಬ್ರಮಣ್ಯೇಶ್ವರ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)