ಸೋಮವಾರ, ಆಗಸ್ಟ್ 10, 2020
26 °C

ಪತ್ರಕರ್ತರಿಗೆ ನಿವೇಶನ: ಪತ್ರಿಕಾಗೋಷ್ಠಿಯಲ್ಲೇ ಆಮಿಷ ಒಡ್ಡಿದ ಜೆಡಿಎಸ್‌ ಮುಖಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪತ್ರಕರ್ತರಿಗೆ ನಿವೇಶನ: ಪತ್ರಿಕಾಗೋಷ್ಠಿಯಲ್ಲೇ ಆಮಿಷ ಒಡ್ಡಿದ ಜೆಡಿಎಸ್‌ ಮುಖಂಡ

ರಾಮನಗರ: ಕುಮಾರಸ್ವಾಮಿ ಮುಖ್ಯಮಂತ್ರಿ ಆದಲ್ಲಿ ಇಲ್ಲಿನ ಪತ್ರಕರ್ತರಿಗೆ ನಿವೇಶನ ಕೊಡಿಸುವುದಾಗಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿ ಅಚ್ಚರಿ‌ ಮೂಡಿಸಿದರು.

ಪತ್ರಕರ್ತರಿಗೆ ನಿವೇಶನ ಹಂಚಿಕೆ ಯೋಜನೆಯು ನನೆಗುದಿಗೆ ಬಿದ್ದಿದ್ದು, ಕುಮಾರಸ್ವಾಮಿ ಶಾಸಕರಾಗಿ‌ ಆಯ್ಕೆಯಾಗಿ ಅಧಿಕಾರ ಹಿಡಿಯುತ್ತಿದ್ದಂತೆಯೇ ಅದಕ್ಕೆ ಚಾಲನೆ ನೀಡಲಾಗುವುದು ಎಂದರು‌.

ಇದರಿಂದ ಮುಜುಗರಕ್ಕೊಳಗಾದ ಇತರ ಮುಖಂಡರು‌ ತಪ್ಪನ್ನು ಸರಿಪಡಿಸುವ ಪ್ರಯತ್ನ ಮಾಡಿದರು.

ಮುಂದುವರಿದು 'ಕುಮಾರಸ್ವಾಮಿ ಎರಡೂ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಬಳಿಕ ಚನ್ನಪಟ್ಟಣ ಕ್ಷೇತ್ರಕ್ಕೆ ರಾಜೀನಾಮೆ ನೀಡಲಿದ್ದಾರೆ' ಎನ್ನುವ ಮೂಲಕವೂ ಮುಖಂಡರನ್ನು ಪೇಚಿಗೆ ಸಿಲುಕಿಸಿದರು.‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.