ಮಂಗಳವಾರ, ಡಿಸೆಂಬರ್ 10, 2019
26 °C
3 ಕಾರು, 3 ದ್ವಿಚಕ್ರ ವಾಹನ ವಶ

ಟೆಸ್ಟ್ ಡ್ರೈವ್ ನೆಪ: ವಾಹನ ಕಳ್ಳನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೆಸ್ಟ್ ಡ್ರೈವ್ ನೆಪ: ವಾಹನ ಕಳ್ಳನ ಬಂಧನ

ಮಧುಗಿರಿ: ಕಾರು ಮತ್ತು ಬೈಕ್‌ಗಳನ್ನು ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ವಾಹನಗಳನ್ನು ಅಪಹರಿಸಿಕೊಂಡು ಹೋಗುತ್ತಿದ್ದ ಕಳ್ಳನನ್ನು ಮಧುಗಿರಿ ಪೊಲೀಸರು ಬಂಧಿಸಿ, ₹ 26.45 ಲಕ್ಷ ಬೆಲೆಬಾಳುವ ಮೂರು ಕಾರು ಮತ್ತು ಮೂರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಹೋಬಳಿಯ ಮಡಿಕೆಹಳ್ಳಿ ನೌಷಾದ್ ಪಾಷಾ (29) ಬಂಧಿತ ಆರೋಪಿ.’ಮಧುಗಿರಿ, ಗುಬ್ಬಿ, ತುಮಕೂರು ನಗರದ  ಹೊಸ ಬಡಾವಣೆ ಠಾಣೆ, ಮಂಡ್ಯ, ಪಾಂಡವಪುರ ಮತ್ತು ಕೊಳ್ಳೆಗಾಲ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿ ಕಾರು ಮತ್ತು ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.’ಮಧುಗಿರಿ ಪಟ್ಟಣದ ಎಂ.ಎಸ್.ಚಂದನ್‌ಕುಮಾರ್‌ ಸ್ವಿಫ್ಟ್ ಡಿಸೈರ್ ಕಾರನ್ನು ಮಾರಾಟ ಮಾಡಲು ಒ.ಎಲ್.ಎಕ್ಸ್‌ನಲ್ಲಿ ಜಾಹೀರಾತು ನೀಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಈ ಜಾಹೀರಾತು ನೋಡಿದ್ದ ಆರೋಪಿ ನೌಷಾದ್ ಹುಂಡೈ ವರ್ನಾ ಕಾರಿನಲ್ಲಿ ಬಂದಿದ್ದ. ಈ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಸ್ವಿಫ್ಟ್ ಡಿಸೈರ್ ಕಾರನ್ನು ಟೆಸ್ಟ್ ಡ್ರೈವ್ ಮಾಡಿಕೊಂಡು ಬರುತ್ತೇನೆ ಎಂದು ಚಂದನ್‌ಕುಮಾರ್ ಅವರ ಕಾರು ತೆಗೆದುಕೊಂಡು ಹೋದವ ಹಿಂದಿರುಗಿ ಬಂದಿರಲಿಲ್ಲ. ಈ ಪ್ರಕರಣ ಜಾಡು ಹಿಡಿದು ಕಳ್ಳರ ಪತ್ತೆಗೆ ಜಾಲ ಬೀಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

ಡಿವೈಎಸ್ಪಿ ಕಲ್ಲೇಶಪ್ಪ, ಸಿಪಿಐ ಎಂ.ಅಂಬರೀಶ್, ಪಿಎಸ್ಐ ಲೂಯಿರಾಮರೆಡ್ಡಿ, ಅಪರಾಧ ವಿಭಾಗದ ಪಿಎಸ್ಐ ನಾರಾಯಣಸ್ವಾಮಿ, ಎಎಸ್‌ಐ ಐ.

ರಾಮಾಂಜಿನಪ್ಪ ಹಾಗೂ ಸಿಬ್ಬಂದಿ ಮುತ್ತುರಾಜು, ಮೆಹಬೂಬ್ ಖಾನ್, ಶ್ರೀಕಂಠಪ್ಪ, ಪುರುಷೋತ್ತಮ್, ಮಲ್ಲಿಕಾರ್ಜುನ್, ನರಸಿಂಹರಾಜು, ಸುರೇಶ್ ನಾಯ್ಕ, ರಮೇಶ್ ಹಾಗೂ ರಂಗರಾಮಯ್ಯ ಅವರನ್ನೊಳಗೊಂಡ ತಂಡವು ಆರೋ‍ಪಿ ಬಂಧಿಸಿದೆ.

ಪ್ರತಿಕ್ರಿಯಿಸಿ (+)