ಸೋಮವಾರ, ಜುಲೈ 13, 2020
25 °C

ವೈಎಸ್‍ಆರ್ ಕಾಂಗ್ರೆಸ್‍ನ 5 ಸಂಸದರು ರಾಜೀನಾಮೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ವೈಎಸ್‍ಆರ್ ಕಾಂಗ್ರೆಸ್‍ನ 5 ಸಂಸದರು ರಾಜೀನಾಮೆ

ನವದೆಹಲಿ: ಕೇಂದ್ರದ ಎನ್‌‍ಡಿಎ ಸರ್ಕಾರ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದೇ ಇರುವುದನ್ನು ಪ್ರತಿಭಟಿಸಿ ವೈಎಸ್‍ಆರ್ ಕಾಂಗ್ರೆಸ್‍ನ 5 ಸಂಸದರು ಶುಕ್ರವಾರ ರಾಜೀನಾಮೆ ನೀಡಿದ್ದಾರೆ.  ಇದರ ಬೆನ್ನಲ್ಲೇ ಟಿಡಿಪಿ ಸಂಸದರು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಚೇಂಬರ್‍‍ ನಲ್ಲಿ ಕುಳಿತು ಮುಷ್ಕರ ಮಾಡಿದ್ದಾರೆ.(ಕೃಪೆ: ಎಎನ್ಐ)

ಬಜೆಟ್ ಅಧಿವೇಶನದ ಕೊನೆಯ ದಿನ ಸಂಸತ್‍ನ ಅಂಗಳಕ್ಕಿಳಿದು ವೈಎಸ್‍ಆರ್ ಸಂಸದರು ಪ್ರತಿಭಟನೆ ನಡೆಸಿದ್ದರು. ಇದಾದನಂತರ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ವೈಎಸ್‌‍ಆರ್ ಕಾಂಗ್ರೆಸ್ ಸಂಸದರಾದ ವರಪ್ರಸಾದ್ ರಾವ್, ವೈ.ವಿ. ಸುಬ್ಬ ರೆಡ್ಡಿ, ಪಿ.ವಿ ಮಿಥುನ್ ರೆಡ್ಡಿ, ವೈ.ಎಸ್. ಅವಿನಾಶ್ ರೆಡ್ಡಿ, ಮೆಕಪತಿ ರಾಜ್‍ಮೋಹನ್ ರೆಡ್ಡಿ ಮೊದಲಾದವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

(ಕೃಪೆ: ಎಎನ್ಐ)

ಇದರ ಬೆನ್ನಲ್ಲೇ ಟಿಡಿಪಿ, ಪವನ್ ಕಲ್ಯಾಣ್ ಅವರ ಜನಸೇನಾ, ಎಡಪಕ್ಷಗಳು ಆಂಧ್ರ ಪ್ರದೇಶದ ಸಂಸದರ ಪ್ರತಿಭಟನೆಗೆ ಬೆಂಬಲ ಸೂಚಿಸಿವೆ. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಒತ್ತಾಯಿಸಿ ಜನಸೇನಾ ಮತ್ತು ಎಡಪಕ್ಷಗಳು  ಪಾದಯಾತ್ರೆ ಹಮ್ಮಿಕೊಂಡಿದ್ದವು. ಪ್ರತಿಭಟನೆ ಸೂಚಕವಾಗಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಇತರ ಸಚಿವರು ಸೈಕಲ್‍ನಲ್ಲಿ ವಿಧಾನಸಭೆಗೆ ಆಗಮಿಸಿದ್ದರು.

ಬಜೆಟ್ ಅಧಿವೇಶನ ಮುಗಿದು ಲೋಕಸಭೆ ಮತ್ತು ರಾಜ್ಯಸಭಾ ಕಲಾಪ ಅನಿಶ್ಚಿತ ಅವಧಿಗೆ ಮುಂದೂಡಿದರೂ, ದೆಹಲಿಯಲ್ಲೇ ಠಿಕಾಣಿ ಹೂಡುವಂತೆ ತೆಲುಗುದೇಶಂ ಪಕ್ಷ ತಮ್ಮ ಸಂಸದರಿಗೆ ಹೇಳಿದೆ. ಅದೇ ವೇಳೆ ಇದೇ ವಿಷಯಕ್ಕೆ ಸಂಬಂಧಿಸಿ ರಾಷ್ಟ್ರಪತಿ ಅವರನ್ನು ಭೇಟಿ ಮಾಡಲು ಸಂದಸದರಿಗೆ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.