ಭಾನುವಾರ, ಡಿಸೆಂಬರ್ 15, 2019
25 °C

ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷೆಗೆ 24 ವರ್ಷ ಜೈಲು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷೆಗೆ 24 ವರ್ಷ ಜೈಲು

ಸೋಲ್‌: ಭ್ರಷ್ಟಾಚಾರ, ಅಧಿಕಾರ ದುರುಪಯೋಗದ ಆರೋಪ ಎದುರಿಸುತ್ತಿದ್ದ ದಕ್ಷಿಣ ಕೊರಿಯಾ ಪದಚ್ಯುತ ಅಧ್ಯಕ್ಷೆ ಪಾರ್ಕ್ ಜಿಯುನ್ ಹೈ ಅವರಿಗೆ ಇಲ್ಲಿನ ನ್ಯಾಯಾಲಯ 24 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಲಂಚ ಸ್ವೀಕಾರ, ಅಧಿಕಾರ ದುರುಪಯೋಗ ಹಾಗೂ ಹಲವು ಕ್ರಿಮಿನಲ್‌ ಪ್ರಕರಣಗಳಲ್ಲಿ ಪಾರ್ಕ್‌ ತಪ್ಪಿತಸ್ಥರು ಎಂದು ತೀರ್ಪು ನೀಡಲಾಗಿದ್ದು, ಇದರಿಂದ 10 ತಿಂಗಳಿನಿಂದ ವಿಚಾರಣೆ ಹಂತದಲ್ಲಿದ್ದ ಪ್ರಕರಣ ಅಂತ್ಯಕಂಡಿದೆ.

ಕಳೆದ ವರ್ಷ ಪಾರ್ಕ್‌ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಅವರ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳೂ ನಡೆದಿದ್ದವು.

ಈ ತೀರ್ಪನ್ನು ದೇಶ ಹಾಗೂ ಪಾರ್ಕ್‌ ಇಬ್ಬರ ಪಾಲಿಗೂ ‘ಹೃದಯದ ಒಡೆಯುವ ಸಂಗತಿ’ ಎಂದು ಅವರ ಉತ್ತರಾಧಿಕಾರಿ ವ್ಯಾಖ್ಯಾನಿಸಿದ್ದಾರೆ.

ಪ್ರತಿಕ್ರಿಯಿಸಿ (+)